ದೊಡ್ಡಬಳ್ಳಾಪುರ: ಇದೇ ತಿಂಗಳ ಅಕ್ಟೋಬರ್ 10ರಿಂದ, 12ರವರೆಗೆ ರಾಜ್ಯ ಟೇಕ್ವಾಂಡೋ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ 42ನೇ ರಾಜ್ಯ ಸಬ್-ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ಮಕ್ಕಳು ಉತ್ತಮ ಸ್ಪರ್ಧೆ ನೀಡಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಎಂಎಸ್‌ವಿ ಪಬ್ಲಿಕ್ ಶಾಲೆಯ ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಬ್ ಜೂನಿಯರ್ ವಿಭಾಗದಲ್ಲಿ 18 ಕೆಜಿ ಒಳಗಿರುವ ವಿಭಾಗದಲ್ಲಿ ಶರಣ್ಯ ಪರಮೇಶ್, ಜೂನಿಯರ್ ವಿಭಾಗದಲ್ಲಿ ಕೆಜಿ ಒಳಗಿರುವ ವಿಭಾಗದಲ್ಲಿ ತ್ರಿಶ್‍ವಂತ್ ರೆಡ್ಡಿ ಸಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರ ಏರ್ಪಡಿಸುವ ದಸರಾ ಕ್ರೀಡಾ ಕೂಟದಲ್ಲಿಯೂ ಸಹ ತ್ರಿಶ್‍ವಂತ್ ರೆಡ್ಡಿ ಸಿ. ಕಂಚಿನ ಪದಕ ಪಡೆದು ಛಾಪನ್ನು ಮೂಡಿಸಿದ್ದಾನೆ.
ಮಕ್ಕಳ ಸಾಧನೆಯನ್ನು ಎಂಎಸ್‌ವಿ ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರಾದ ರೆಮ್ಯ ಬಿ.ವಿ ಮಾತನಾಡಿ, “ಪೋಷಕರ ಸಹಕಾರ, ತರಬೇತುದಾರರ ಮಾರ್ಗದರ್ಶನ ಮತ್ತು ಮಕ್ಕಳ ಪರಿಶ್ರಮದ ಪ್ರತಿಫಲವಾಗಿ ಈ ಸಾಧನೆ ಶ್ಲಾಘನೀಯ” ಎಂದು ಹರಸಿ, ಅಭಿನಂದಿಸಿದರು.
ಈ ವೇಳೆ ಶಾಲೆಯ ಶಿಕ್ಷಕವೃಂದ, ಸಾಧನೆಗೈದ ಹಾಗೂ ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ಅವರನ್ನು ಅಭಿನಂದಿಸಿದ್ದಾರೆ.