ದೊಡ್ಡಬಳ್ಳಾಪುರ: ಕ್ಯಾಂಟರ್ ಮತ್ತು ಕಂಟೇನರ್ ಲಾರಿ ನಡುವೆ ಡಿಕ್ಕಿ (Accident) ಸಂಭವಿಸಿ ಕ್ಯಾಂಟರ್ ಜಖಂಗೊಂಡಿರುವ ಘಟನೆ ಇಂದು ಬೆಳಗ್ಗೆ (ಅ.15) ಅರಳು ಮಲ್ಲಿಗೆ ಕೆರೆ ಕಟ್ಟೆಯ ಮೇಲೆ ನಡೆದಿದೆ.
ನೆಲಮಂಗಲದಿಂದ ಬಂದ ಕ್ಯಾಂಟರ್ ಅರಳುಮಲ್ಲಿಗೆ ಕೆರೆ ಕಟ್ಟೆಯ ಮೇಲಿನ ತಿರುವಿನಲ್ಲಿ ದೊಡ್ಡಬಳ್ಳಾಪುರ ಕಡೆಯಿಂದ ಸಾಗುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Thunderbolt: ದೊಡ್ಡಬಳ್ಳಾಪುರದಲ್ಲಿ ಭಾರೀ ಮಳೆ.. ಸಿಡಿಲು ಬಡಿದು ಮನೆಗೆ ಹಾನಿ..!| Video ನೋಡಿ
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲವಾಗಿದ್ದು, ಕ್ಯಾಂಟರ್ ಮುಂಭಾಗ ಜಖಂ ಗೊಂಡಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಭೀಕರ ಅಪಘಾತ.. ಚಾಲಕನ ಸ್ಥಿತಿ ಗಂಭೀರ| Video