ದೊಡ್ಡಬಳ್ಳಾಪುರ; ಚಾಲಕನ ನಿಯಂತ್ರಣ ತಪ್ಪಿದ ಕಾರು ದೇವಸ್ಥಾನದ ಗೋಡೆಗೆ ಡಿಕ್ಕಿ (Accident) ಹೊಡೆದಿರುವ ಘಟನೆ ನಗರದ ಅರಳು ಮಲ್ಲಿಗೆ ಬಾಗಿಲು ಬಳಿ ಸಂಭವಿಸಿದೆ.
ದೊಡ್ಡಬಳ್ಳಾಪುರ ನಗರವಾಸಿ ಅರ್ಚಕರ ಸೇರಿದ ಕಾರು ಎನ್ಬಲಾಗುತ್ತಿದ್ದು, ರಿಪೇರಿಗೆಂದು ಬಿಟ್ಟಿದ್ದರಂತೆ. ಆದರೆ ಮೆಕಾನಿಕ್ ದುರಸ್ತಿಯಾದ ಕಾರಿನಲ್ಲಿ ಗೆಳೆಯರೊಂದಿಗೆ ತೆರಳುವ ವೇಳೆ ಮಂಗಳವಾರ ರಾತ್ರಿ 11.30ರ ಸುಮಾರಿಗೆ ನಿಯಂತ್ರಣ ತಪ್ಪಿ ಅರಳು ಮಲ್ಲಿಗೆ ಬಾಗಿಲು ಬಳಿಯ ಗಣೇಶ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಚಾಲಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.