ದೊಡ್ಡಬಳ್ಳಾಪುರ: ಮೊಮ್ಮಗನ ಜನ್ಮದಿನಕ್ಕೆ ತೆರಳಿದ್ದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆಯ ಬಾಗಲು ಮೀಟಿ ಲಕ್ಷಾಂತರ ರೂ. ಒಡವೆ, ನಗದು ದೋಚಿ (Theft) ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.
ಬುಧವಾರ ರಾತ್ರಿ ಕಳ್ಳತನಕ್ಕೆ ಒಳಗಾದ ಮನೆಯನ್ನು ಹೊಸಹುಡ್ಯ ಗ್ರಾಮದ ಸೋಮಣ್ಣ ಎನ್ನುವವರದ್ದು ಎನ್ನಲಾಗಿದೆ.
ನಿನ್ನೆ ಸೋಮಣ್ಣ ಅವರ ಕುಟುಂಬ ಮೊಮ್ಮಗನ ಜನ್ಮದಿನದ ಕಾರಣ ಸುರದೇನಪುರಕ್ಕೆ ತೆರಳಿದ್ದರಂತೆ. ಇದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆಯ ಬಾಗಿಲು, ಬೀಗವನ್ನು ಆರೆಕೋಲು ಬಳಸಿ ಮೀಟಿರುವ ಮನೆಗೆ ನುಗ್ಗಿದ್ದಾರೆ.
ಈ ವೇಳೆ ಸುಮಾರು 250 ಗ್ರಾಂ ಚಿನ್ನ, 2KG ಬೆಳ್ಳಿ, 40 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ, ಇನ್ನೂ ಒಡವೆಗಳನ್ನು ಇಡಲಾಗಿದ್ದ ಬ್ಯಾಗ್ ಹಾಗೂ ಬಾಕ್ಸ್‌ಗಳನ್ನು ಮನೆಯ ಸಮೀಪದಲ್ಲಿಯೇ ಎಸೆದು ಹೋಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಸೋಮಣ್ಣ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.