ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ (JDS) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ (H.D. Deve Gowda) ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ (B. Mune Gowda) ಅವರು ಭೇಟಿಯಾಗಿ ಮಾತುಕತೆ ನಡೆಸಿದರು.
ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹೆಚ್.ಡಿ. ದೇವೇಗೌಡ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುನೇಗೌಡ ಅವರು ಸಂಘಟನಾ ಕಾರ್ಯದರ್ಶಿ ಮುನಿರಾಮಯ್ಯ ಅವರೊಂದಿಗೆ ದೇವೇಗೌಡರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಪಟ್ಟಿ ವಿಳಂಬವೇಕೆ..?
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಟಿಎಪಿಸಿಎಸ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಕುರಿತು ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದಿರಾ..? ಅಭ್ಯರ್ಥಿಗಳು ಕಾತರದಿಂದ ಕಾಯುತ್ತಿದ್ದರು ಪಟ್ಟಿ ವಿಳಂಬವೇಕೆ..? ಎಂದು ಬಿ. ಮುನೇಗೌಡ ಅವರನ್ನು ಹರಿತಲೇಖನಿ ಪ್ರಶ್ನಿಸಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಮುನೇಗೌಡ ಅವರು, ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆರೋಗ್ಯ ವಿಚಾರಿಸಲು ಭೇಟಿ ನೀಡಲಾಗಿತ್ತೆ ಹೊರತು, ಚುನಾವಣೆ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ.
ಇದನ್ನೂ ಓದಿ; ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆ: ಕಮಲ-ದಳಕ್ಕೆ ಮೈತ್ರಿ ಗೊಂದಲ..!
ವೈದ್ಯರ ಸೂಚನೆಯಂತೆ ದೇವೇಗೌಡರಿಗೆ ಇನ್ನೂ 10 ದಿನ ವಿಶ್ರಾಂತಿ ಅಗತ್ಯವಿದೆ. ಬಳಿಕ, ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನಕ್ಕೆ ಖುದ್ದು ಆಗಮಿಸಿ ಎಲ್ಲರನ್ನೂ ಭೇಟಿಯಾಗಲಿದ್ದಾರೆಂದು ಹೇಳಿದರು ಎಂದರು.
ಅಲ್ಲದೆ ಈ ಮುಂಚೆಯೇ ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆಯನ್ನು ಜೆಡಿಎಸ್-ಬಿಜೆಪಿ ಮೈತ್ರಿ ಮೂಲಕವೇ ಎದುರಿಸುವಂತೆ ಮಾಜಿ ಪ್ರಧಾನಿಗಳು ಸೂಚನೆ ನೀಡಿದ್ದರು. ಇನ್ನೂ ಮೈತ್ರಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸ್ವಲ್ಪ ವಿಳಂಬವಾಗಿದ್ದು, ಅಂತಿಮ ಹಂತದಲ್ಲಿರುವ ಕಾರಣ ಎರಡು ದಿನಗಳ ಒಳಗಾಗಿ ಬಿಡುಗಡೆ ಮಾಡಲಾಗುವುದು ಎಂದರು.