ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಬೆಂಗಳೂರು- ಹಿಂದೂಪುರ ನಡುವಿನ ರಾಜ್ಯ ಹೆದ್ದಾರಿ ಬಾಶೆಟ್ಟಿಹಳ್ಳಿ ಸಮೀಪದ ನವೋದಯ ಶಾಲೆ ಬಳಿ ಭೀಕರ ಅಪಘಾತ (Accident) ಸಂಭವಿಸಿದೆ.

ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದು, ಬಸ್ಸಿನ ಕೆಳಗೆ ನುಗ್ಗಿದೆ.
ಘಟನೆಯಲ್ಲಿ ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಸಮೀಪದಲ್ಲಿಯೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದೂಪುರ ಮೂಲದ 5 ಮಂದಿ ಕಾರಿನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಮುಂದೆ ಸಾಗುತ್ತಿದ್ದ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಹಿಂದೆ ಬರುತ್ತಿದ್ದ ಕಾರು ಬ್ರೇಕ್ ಹಾಕಿದರು, ಮಳೆಯ ಕಾರಣ ರಸ್ತೆಯ ಜಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.