ಕರ್ನೂಲ್: ಹೈದರಾಬಾದ್‌ನಿಂದ (Hyderabad) ಬೆಂಗಳೂರಿಗೆ (Bangalore) ಬರುತ್ತಿದ್ದ ಖಾಸಗಿ ಬಸ್ಸೊಂದು ಆಂಧ್ರಪ್ರದೇಶದ (Andhra Pradesh) ಕರ್ನೂಲು (Kurnool) ಜಿಲ್ಲೆಯ ಚಿನ್ನ ಟೆಕೂರು ಬಳಿ ನಡೆದ ಭೀಕರ ಅಗ್ನಿ (fire) ದುರಂತದಲ್ಲಿ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದಾರೆ.

ವರದಿಗಳ ಅನ್ವಯ ಕಾವೇರಿ ಹೆಸರಿನ ವೋಲ್ಲೋ ಬಸ್‌ನಲ್ಲಿ 44 ಪ್ರಯಾಣಿಕರು ಇದ್ದರು. ಶುಕ್ರವಾರ ಬಳಗಿನ ಜಾವ 3 ಗಂಟೆಯ ವೇಳೆಗೆ ವೇಗವಾಗಿ ಬಂದ ಬೈಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ನಂತರ ಬೈಕ್ ಬಸ್‌ನ ಅಡಿ ಸಿಲುಕಿಕೊಂಡು ಸ್ವಲ್ಪ ದೂರದವರೆಗೆ ಎಳೆಯಲ್ಪಟ್ಟಿದೆ.
#Kurnool:
— NewsMeter (@NewsMeter_In) October 24, 2025
Tragic #accident in #Andhra Pradesh
A #Bengaluru-bound #Kaveri Travels bus from #Hyderabad was completely gutted in flames near #Chinnatekuru village, Kurnool district, around 3 AM today (Oct 24) after a two-wheeler rammed into it.
At least 15 feared dead, while 12… pic.twitter.com/1nXWmBt8q7
ಇದರಿಂದಾಗಿ ಘರ್ಷಣೆ ಸಂಭವಿಸಿ, ಕಿಡಿ ಹೊತ್ತಿಕೊಂಡಿದೆ. ಬೈಕ್ ಇಂಧನ ಟ್ಯಾಂಕ್‌ಗೆ ಬಡಿದಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ ಅನ್ನು ಆವರಿಸಿಕೊಂಡಿದೆ.
ವೋಲ್ಲೋ ಬಸ್ ಏರ್ ಕಂಡಿಷನ್ ಹೊಂದಿದ್ದರಿಂದ ಸಂಪೂರ್ಣ ಕಿಟಕಿ ಬಾಗಿಲುಗಳನ್ನು ಮುಚ್ಚಲಾಗಿತ್ತು. ಸ್ವೀಪರ್ ಬಸ್ ಆಗಿದ್ದರಿಂದ ದುರಂತದ ಸಮಯ ಪ್ರಯಾಣಿಕರು ನಿದ್ರಿಸುತ್ತಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಲ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಹುತೇಕರು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದ್ದಾರೆ.
ಸದ್ಯ ಬಸ್‌ನಲ್ಲಿದ್ದ 12 ಜನರನ್ನು ರಕ್ಷಣೆ ಮಾಡಲಾಗಿದೆ. ಆದರೆ ಉಳಿದ ಪ್ರಯಾಣಿಕರೆಲ್ಲರೂ ಜೀವಂತ ಸುಟ್ಟು ಹೋಗಿದ್ದಾರೆ. ಬಹುತೇಕರ ಗುರುತು ಸಿಗದಷ್ಟರ ಮಟ್ಟಿಗೆ ಮೃತದೇಹಗಳು ಸುಟ್ಟು ಹೋಗಿವೆ. ಮೃತರ ಗುರುತನ್ನು ಪತ್ತೆಹಚ್ಚಲು ಡಿಎನ್ ಪರೀಕ್ಷೆಯ ಅಗತ್ಯವಿದೆ ಎನ್ನಲಾಗಿದೆ.