
ಅಮರಾವತಿ: ಕರುನಾಡು ಇಂದು “70ನೇ ಕರ್ನಾಟಕ ರಾಜ್ಯೋತ್ಸವ”ದ (Karnataka Rajyotsava Celebration) ಸಂಭ್ರಮದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಕನ್ನಡಮ್ಮನ ಭಕ್ತಿಭಾವವೇ ತುಂಬಿಹೋಗಿದೆ.
ಪ್ರಧಾನಿ ನರೇಂದ್ರ ಮೋದಿ, RCB ತಂಡ ಸೇರಿದಂತೆ ಅಸಂಖ್ಯಾತರು 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆಗೆ ಶುಭಕೋರಿದ್ದಾರೆ.
ಅಂತೆಯೇ ತೆಲುಗು ಚಿತ್ರರಂಗದ ಖ್ಯಾತ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕೂಡ ಶುಭಕೋರಿ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ಉಪಮುಖ್ಯಮಂತ್ರಿ ಆಂಧ್ರಪ್ರದೇಶ ಎಂಬ ಅಧಿಕೃತ ಖಾತೆಯಲ್ಲಿ ಈ ಕುರಿತಂತೆ ಶುಭಕೋರಿರುವ ಪವನ್ ಕಲ್ಯಾಣ್ ಅವರು ಎರಡು ರಾಜ್ಯಗಳ ನಡುವಿನ ಸಹೋದರ ಬಾಂಧವ್ಯ ಮೆರೆದಿದ್ದಾರೆ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
— Deputy CMO, Andhra Pradesh (@APDeputyCMO) November 1, 2025
ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು – @PawanKalyan#KannadaRajyotsava #ಕನ್ನಡರಾಜ್ಯೋತ್ಸವ pic.twitter.com/IYcGrmj0AR
ಕರ್ನಾಟಕದ ರಾಜ್ಯೋತ್ಸವದ ಕುರಿತು ಶುಭಕೋರಿರುವ ಪವನ್ ಕಲ್ಯಾಣ್ ಅವರು, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಕನ್ನಡದಲ್ಲಿ ಶುಭಕೋರಿದ್ದಾರೆ.