ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಬಿಗ್‌ಬಾಸ್ (BigBoss) 12ನೇ ಸೀಸನ್‌ಗೆ ಕಾಲಿಟ್ಟಿರುವ ಗಿಲ್ಲಿ ನಟ (Ghilli Nata) ಅಲ್ಲಿಯೂ ತನ್ನದೇ ಆದ ಹಾಸ್ಯ ಶೈಲಿಯಿಂದ ವೀಕ್ಷಕರ ಮನ ಗೆದ್ದಿದ್ದು, ಅವರ ಪರ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.
ಈಗ ವಿಚಾರಕ್ಕೆ ಬರೋಣ, ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ ನಟಿಸಿರುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಾಗಿದೆ. ಮಾತ್ರವಲ್ಲ, ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡುವ ಮೂಲಕ ಗಿಲ್ಲಿ ನಟನಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದೆ.
Introducing our very own “Gilly Nata” 🔥
— Shri Jaimatha Combines (@sjmcfilms) November 4, 2025
One of the prominent characters in “TheDevil”! 💥 pic.twitter.com/l6JNcgOVRe
ಶ್ರೀ ಜೈ ಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಗಿಲ್ಲಿ ನಟ ಶರ್ಟ್ ಹಾಕಿ, ಅದಕ್ಕೆ ಟೈ ಹಾಕಿ ಅಫಿಶಿಯಲ್ ಲೂಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಡೆವಿಲ್ ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ನಟ ದರ್ಶನ್ ಜೊತೆ ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮತ್ತಿತರರು ನಟಿಸಿದ್ದಾರೆ.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಡೆವಿಲ್ ಸಿನಿಮಾದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.