ಪಾಟ್ನಾ: ಚುನಾವಣೆ ಆಯೋಗದ ವಿರುದ್ಧ ವೋಟ್ ಚೋರಿ (Vote Chori) ಆರೋಪ ಮುಂದುವರೆಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಈಗ ಮತ್ತೊಂದು ಗಂಭೀರ ಆರೋಪ ಮಾಡಿ ಗಮನ ಸೆಳೆದಿದ್ದು, ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಚುನಾವಣೆಯಲ್ಲಿ ಮತದಾನ ಮಾಡಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಬಿಹಾರ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದಾರೆಂದಿದ್ದು, ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ರಾಹುಲ್ ಗಾಂಧಿ, ಭಾರತದ ನನ್ನ ಯುವ ಮತ್ತು ಜನರಲ್ ಝಡ್ ಸ್ನೇಹಿತರೇ,
ಹರಿಯಾಣದಲ್ಲಿ ಸರ್ಕಾರವನ್ನು ಮತ ಕಳ್ಳತನದ ಮೂಲಕ ಹೇಗೆ ಕದಿಯಲಾಯಿತು ಮತ್ತು ಇಡೀ ರಾಜ್ಯದ ಸಾರ್ವಜನಿಕ ಅಭಿಪ್ರಾಯವನ್ನು ಕಸಿದುಕೊಳ್ಳಲಾಯಿತು ಎಂಬುದನ್ನು ನಾನು ಸಾಕ್ಷ್ಯಾಧಾರಗಳೊಂದಿಗೆ ಪ್ರದರ್ಶಿಸಿದೆ.
ಕೆಲವು ದಿನಗಳ ಹಿಂದೆ, ನಾನು SIR ಮೂಲಕ ಮತದಾರರ ಪಟ್ಟಿಗಳ ವ್ಯಾಪಕ ಕುಶಲತೆಯ ಬಗ್ಗೆ ಜಾಗೃತಿ ಮೂಡಿಸಲು ಬಿಹಾರದಲ್ಲಿ ‘ಮತದಾರರ ಹಕ್ಕುಗಳ ಯಾತ್ರೆ’ಯನ್ನು ಸಹ ನಡೆಸಿದ್ದೆ.
ಬಿಹಾರದ ಪ್ರತಿಯೊಂದು ಮೂಲೆಯಿಂದ ಬರುವ ಸುದ್ದಿಗಳು ಮತ್ತು ವೀಡಿಯೊಗಳು ಮತ ಕಳ್ಳತನದ ಪುರಾವೆಗಳನ್ನು ಮತ್ತಷ್ಟು ಬಲಪಡಿಸುತ್ತಿವೆ.
ज्ञानेश "व्यवस्था" कुमार को सबूत चाहिए! pic.twitter.com/8EQgPWax69
— Indian Youth Congress (@IYC) November 6, 2025
ಲಕ್ಷಾಂತರ ಮತದಾರರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು ಈಗ ಜನರು ಮತಗಟ್ಟೆಗಳಲ್ಲಿ ಮತ ಚಲಾಯಿಸುವುದನ್ನು ತಡೆಯಲಾಗುತ್ತಿದೆ..
ये सब क्या देखना पड़ रहा है 👀 pic.twitter.com/TgIyS9w3uJ
— Alok Sharma (@Aloksharmaaicc) November 7, 2025
ಅದೇ ಸಮಯದಲ್ಲಿ, ಇತರ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಮತ ಚಲಾಯಿಸಿದ ಅನೇಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಚಲಾಯಿಸುತ್ತಿದ್ದಾರೆ.
पहले दिल्ली विधानसभा चुनाव में कराई गई फ़र्ज़ी वोटिंग‼️
— AAP (@AamAadmiParty) November 7, 2025
अब बिहार में BJP कर रही वोट चोरी… pic.twitter.com/KUhIHGHWGU
ನೆನಪಿಡಿ, ಮತ ಕಳ್ಳತನದ ಮೂಲಕ ರಚನೆಯಾದ ಸರ್ಕಾರವು ಯುವಕರು, ಜನರಲ್ ಝಡ್ ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಎಂದಿಗೂ ಕೆಲಸ ಮಾಡುವುದಿಲ್ಲ.
ಪ್ರಜಾಪ್ರಭುತ್ವದ ಈ ಕೊಲೆಯ ಪ್ರಮುಖ ಅಪರಾಧಿಗಳು:
ಜ್ಞಾನೇಶ್ ಕುಮಾರ್, ಸುಖಬೀರ್ ಸಿಂಗ್ ಸಂಧು, ವಿವೇಕ್ ಜೋಶಿ. ಇವರು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು, ಆದರೆ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ದೊಡ್ಡ ವಿಶ್ವಾಸಘಾತುಕತನವನ್ನು ಎಸಗುತ್ತಿದ್ದಾರೆ.
ಮತದಾನದ ಹಕ್ಕನ್ನು ರಕ್ಷಿಸಲು ರಚಿಸಲಾದವರು ನಿಮ್ಮ ಭವಿಷ್ಯವನ್ನು ಕದಿಯುವಲ್ಲಿ ಪಾಲುದಾರರಾಗಿದ್ದಾರೆ ಎಂದಿದ್ದಾರೆ
भारत के मेरे युवा और Gen Z साथियों,
— Rahul Gandhi (@RahulGandhi) November 6, 2025
कल ही मैंने सबूतों के साथ साबित किया था कि कैसे हरियाणा में वोट चोरी के ज़रिए सरकार चोरी की गई, और एक पूरे राज्य का जनमत छीन लिया गया।
कुछ दिनों पहले बिहार में मैंने ‘वोटर अधिकार यात्रा’ भी की थी, ताकि जनता को SIR के माध्यम से बड़े पैमाने पर… https://t.co/YZnnRU0Aov
ವೋಟ್ ಚೋರಿಗೆ ಆರೋಪ ಹೊತ್ತು ನಿವೃತ್ತಿ ಜೀವನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ
ರೇಗಾದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ (Gyanesh Kumar) ಮತ್ತು ಇತರ ಇಬ್ಬರು ಅಧಿಕಾರಿಗಳನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡಿದ್ದಾರೆ.
ವೇದಿಕೆಯಲ್ಲಿ ಪ್ರಿಯಾಂಕಾ ಗಾಂಧಿ, ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ತೀಕ್ಷ್ಯ ಎಚ್ಚರಿಕೆ ನೀಡಿದ್ದು, ವೋಟ್ ಚೋರಿಗೆ ಸಹಕರಿಸಿರುವ ಜ್ಞಾನೇಶ್ ಕುಮಾರ್, ನೀವು ನೆಮ್ಮದಿಯಿಂದ ನಿವೃತ್ತರಾಗಲು ಸಾಧ್ಯವಿಲ್ಲ.
ಇತಿಹಾಸದ ಪುಟಗಳಲ್ಲಿ ಜ್ಞಾನೇಶ್ ಕುಮಾರ್ ದಾಖಲಾಗಲಿದೆ. ಬಳಿಕ ಜನರನ್ನು ಉದ್ದೇಶಿಸಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ನೀವು ಎಂದಿಗೂ ಮರೆಯಬಾರದು ಎಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ’ ಎಂದ ಪ್ರಿಯಾಂಕಾ ಎಸ್‌ಎಸ್ ಸಂಧು ಹಾಗೂ ವಿವೇಕ್ ಜೋಶಿ ಹೆಸರುಗಳನ್ನು ಕೂಡ ಹೇಳಿದ್ದಾರೆ.
ಈ ವೇಳೆ ಚುನಾವಣೆ ಅಧಿಕಾರಿಗಳ ಹೆಸರು ಹೇಳಿದಾಗಿ ಸಭೆಯಲ್ಲಿದ್ದ ಜನರು “ಚೋರ್-ಚೋರ್” (ಕಳ್ಳ-ಕಳ್ಳ) ಎಂಬ ಘೋಷಣೆಗಳನ್ನು ಕೂಗಿದರು.