Astrology: There is a possibility of making profits in business

ದಿನ ಭವಿಷ್ಯ: ಈ ರಾಶಿಯವರಿಂದು ಚೂಪಾದ ವಸ್ತುಗಳನ್ನು ಎಚ್ಚರಿಕೆಯಿಂದ ಬಳಸಿ

Astrology; ಸೋಮವಾರ, ನವೆಂಬರ್ 10, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ನಿಮ್ಮ ಜೀವನದಲ್ಲಿ ನಡೆಯುವ ಸನ್ನಿವೇಶಗಳು ನಿಮಗೆ ಅನುಕೂಲವಾಗಿದ್ದರೂ ನೀವು ಬೇರೆಯವರ ಮೇಲೆ ಅವಲಂಬಿತ ರಾಗಿದ್ದರೆ ಸಮಸ್ಯೆಗಳು ಎದುರಾಗಬಹುದು. ಜಾಗೃತರಾಗಿರಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ವೃಷಭ ರಾಶಿ

ಸಮಯ ಕಳೆದಂತೆ ಹಣಕಾಸು ವಿಚಾರಗಳಲ್ಲಿ ಹೆಚ್ಚು ಜಾಗೃತರಾಗುತ್ತೀರಿ. ಇತರರನ್ನು ಹೆಚ್ಚು ಗೌರವದಿಂದ ನೋಡುತ್ತೀರಿ. ನಿಮ್ಮ ನಿರ್ಧಾರಗಳು ನಿಮಗೆ ತೃಪ್ತಿ ನೀಡಲಿದೆ.(ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ದಿನದ ಆರಂಭದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿದರೆ ಚಿಂತಿಸಬೇಡಿ, ಕಾಲ ಕಳೆದಂತೆ ಪರಿಸ್ಥಿತಿ ಉತ್ತಮ ವಾಗಲಿದೆ. ಮಧ್ಯಾಹ್ನದ ವೇಳೆಗೆ ಉತ್ಸಾಹ ದಿಂದಿರಲಿದ್ದೀರಿ. ದೇಹ ವಿಶ್ರಾಂತಿ ಬಯಸಿದರೆ, ವಿಶ್ರಾಂತಿ ಪಡೆದುಕೊಳ್ಳಿ. ಅತಿಯಾದ ಒತ್ತಡಕ್ಕೆ ಸಿಲುಕದಿರಿ.(ಭಕ್ತಿಯಿಂದ ಶ್ರೀ ಶಕ್ತಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ಮನೆಯಲ್ಲಿ ಶುಭ ಸಮಾ ರಂಭಗಳು ನಡೆಯಬಹುದು. ಜವಾಬ್ದಾರಿಗಳು ಹೆಚ್ಚಾಗಲಿದೆ. ನಿಮ್ಮ ಪಾಲಿಗೆ ಬಂದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿ. ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಚೂಪಾದ ವಸ್ತುಗಳನ್ನು ಎಚ್ಚರಿಕೆಯಿಂದ ಬಳಸಿ. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಸಿಂಹ ರಾಶಿ

ಈವರೆಗೆ ಹಣಕಾಸಿನ ತೊಂದರೆ ಎದುರಾಗಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ನೀವು ಎರಡು ಅಂಶಗಳ ಬಗ್ಗೆ ಗಮನವಿಟ್ಟುಕೊಳ್ಳ ಬೇಕು. ಒಂದು ತಾಳ್ಮೆ ಮತ್ತೊಂದು ಸಹನೆ.(ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ

ಎಲ್ಲಾ ಅಡೆತಡೆಗಳನ್ನು ಎದುರಿಸಿದ್ದೀರಿ. ಇತರರು ನಿಮ್ಮ ಆಜ್ಞೆ ಮತ್ತು ಸಲಹೆಗಳನ್ನು ನಿರಾಕರಿಸಿದರೆ ಒತ್ತಾಯಿಸಬೇಡಿ. ಬದಲಾಗಿ ಅವರೇ ಒಪ್ಪಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭ ವಾಗುವುದು.)

ತುಲಾ ರಾಶಿ

ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ,ನೀವು ಅಸಾಧಾರಣವಾಗಿ ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ಇಂದು ಹಣದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗುತ್ತದೆ. ಜೊತೆಗೆ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಹೆಚ್ಚು ಶ್ರಮಿಸಬೇಕು. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.(ಭಕ್ತಿಯಿಂದ ಶ್ರೀ ಗಾಯತ್ರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ವ್ಯವಹಾರಗಳಲ್ಲಿ ಉತ್ತಮ ಅವಕಾಶಗಳು ಬರುವ ನಿರೀಕ್ಷೆಗಳಿವೆ. ಅದರಿಂದ ವಂಚಿತರಾಗದಿರಿ. ಮನಸ್ಸಿ ನಿಂದ ಆಲೋಚಿಸಬೇಡಿ. ಉದ್ವಿಗ್ನತೆಗೆ ಒಳಗಾಗದಿರಿ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ

ಸಲಹೆಗಳಿಂದ ಬರುವ ಒತ್ತಡಗಳಿಂದ ಹೊರಬನ್ನಿ. ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರಿ. ಸಂಗಾತಿಯು ವಿರುದ್ಧವಾದ ನಿರೀಕ್ಷೆಗಳನ್ನು ಹೊಂದಿದ್ದರೆ, ಅದರಿಂದ ಕುಗ್ಗಬೇಡಿ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ನೀವು ಯೋಚನೆ ಮಾಡಿ ಯೋಜಿಸಿದ ಕಾರ್ಯಗಳ ಮೇಲೆ ಗಮನಹರಿಸುವ ಸಮಯ ಬಂದಿದೆ.ಅದರತ್ತ ಗಮನಹರಿಸಿ. ವಿಳಂಬ ನೀತಿ ಅನುಸರಿಸದಿರಿ. ಸಾಧನೆ ಮಾಡುವ ಸಮಯ ಸನ್ನಿಹಿತವಾಗಿದೆ. (ಭಕ್ತಿಯಿಂದ ಶ್ರೀ ಸವಿತೃ ಸೂರ್ಯ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ

ನಿಮ್ಮ ಮನಸ್ಥಿತಿ ಶೀಘ್ರದಲ್ಲೇ ಹಗುರವಾಗುತ್ತದೆ, ನಿಮ್ಮ ಸ್ವಂತ ವೈಯಕ್ತಿಕ ಭಾವನಾತ್ಮಕ ಗುರಿಗಳೊಂದಿಗೆ ಮುಂದುವರಿಯಲು ಇದು ಉತ್ತಮ ಸಮಯ. ನಿಮ್ಮ ದೃಢ ನಿರ್ಧಾರಗಳು ಹಾಗೆಯೇ ಇರಲಿ. ನೀವು ಮಕ್ಕಳು ಅಥವಾ ಕಿರಿಯ ಸಂಬಂಧಗಳ ಜವಾಬ್ದಾರಿಯನ್ನು ಹೊಂದಿದ್ದರೆ ಮಾತ್ರ ನೀವು ಸಂತೃಪ್ತರಾಗಿರುತ್ತೀರಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಮೀನ ರಾಶಿ

ನಿಮ್ಮೊಂದಿಗೆ ನೀವು ನಿಜವಾಗಿಯೂ ಶಾಂತಿಯಿಂದಿರಲು ಇನ್ನೂ ಕೆಲವು ಮಾರ್ಗಗಳಿವೆ.ಆದರೆ, ಇದು ಕೇವಲ ಭ್ರಮೆ ಎಂದು ನಿಮ್ಮ ಅಂತರಾಳದಲ್ಲಿ ನಿಮಗೆ ತಿಳಿದಿದೆ. ಆದ್ದರಿಂದ, ಪ್ರಸ್ತುತ ಸನ್ನಿವೇಶಗಳನ್ನು ಹೆಚ್ಚು ಮಾಡಿ, ವಿಶೇಷವಾಗಿ ಇತರ ಜನರು ನಿಮ್ಮ ಬಗ್ಗೆ ನಿಜವಾದ ಆಸಕ್ತಿಯನ್ನು ತೋರಿಸುತ್ತಿದ್ದಾರೆ.(ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಷಷ್ಠಿ
ನಕ್ಷತ್ರ: ಪುನರ್ವಸು ನಕ್ಷತ್ರ.

ರಾಹುಕಾಲ: 07:30AM ರಿಂದ 09:00AM
ಗುಳಿಕಕಾಲ: 01:30PM ರಿಂದ 03:00PM
ಯಮಗಂಡಕಾಲ: 10:30AM ರಿಂದ 12:00PM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಸಭೆ: ಆಡಳಿತ ಮಂಡಳಿ ವೈಫಲ್ಯ ಬಯಲು ಮಾಡಿದ ಸಾರ್ವಜನಿಕರು

ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಸಭೆ: ಆಡಳಿತ ಮಂಡಳಿ ವೈಫಲ್ಯ ಬಯಲು ಮಾಡಿದ ಸಾರ್ವಜನಿಕರು

ನಗರಸಭೆ (Doddaballapur Municipal Council) ವತಿಯಿಂದ 2026-27ನೇ ಸಾಲಿನ ಆಯ-ವ್ಯಯ (Budget) ಕುರಿತ ಸಾರ್ವಜನಿಕ ಸಮಾಲೋಚನೆಯ ಸಭೆ ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ

[ccc_my_favorite_select_button post_id="119326"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಆಲ್ ಇಂಡಿಯಾ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆರ್.ಎಲ್. ಜಾಲಪ್ಪ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ಆಲ್ ಇಂಡಿಯಾ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆರ್.ಎಲ್. ಜಾಲಪ್ಪ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು

ಆರ್.ಎಲ್. ಜಾಲಪ್ಪ (R.L. Jalapppa) ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಗೌತಮಿ .ಬಿ ಹಾಗೂ ಹೇಮಾ .ಬಿ ವಿ ಅವರು ಆಲ್ ಇಂಡಿಯಾ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ (All India Ball Badminton Competition) ವಿಶ್ವೇಶ್ವರಯ್ಯ

[ccc_my_favorite_select_button post_id="119295"]

RCB: ಮತ್ತೆ ಕಪ್ ನಮ್ದು

[ccc_my_favorite_select_button post_id="119174"]

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ.

[ccc_my_favorite_select_button post_id="118983"]

ಜ.30 ರಂದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ

[ccc_my_favorite_select_button post_id="118943"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ದೊಡ್ಡಬಳ್ಳಾಪುರ: ಪತ್ನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯುತ್ತಿದ್ದವ ಅಪಘಾತದಲ್ಲಿ ಸಾವು.‌.!

ದೊಡ್ಡಬಳ್ಳಾಪುರ: ಪತ್ನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯುತ್ತಿದ್ದವ ಅಪಘಾತದಲ್ಲಿ ಸಾವು.‌.!

ಮಡದಿಗೆ ಉಂಟಾಗಿದ್ದ ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನಪ್ಪಿರುವ ಘಟನೆ (Accident) ತಾಲೂಕಿನಲ್ಲಿ ಸಂಭವಿಸಿದೆ.

[ccc_my_favorite_select_button post_id="119259"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!