ಕೆ.ಎಂ. ಸಂತೋಷ್, ಆರೂಢಿ: ರಾಷ್ಟ್ರ ರಾಜಧಾನಿ ದೆಹಲಿ ಕೆಂಪು ಕೋಟೆ ಸಮೀಪ ಸೋಮವಾರ ಸಂಜೆ ಕಾರು ಸ್ಪೋಟಗೊಂಡಿದ್ದು (Delhi blast) ಪಹಲ್ಗಾವ್ ದುರ್ಘಟನೆ ಬಳಿಕ ಇಡೀ ದೇಶ ಮತ್ತೊಮ್ಮೆ ಬೆಚ್ಚಿಬಿದ್ದಿದೆ.
ಸೋಮವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವೈದ್ಯರನ್ನು ಬಂಧಿಸಿ ಸುಮಾರು 2,900 ಕೆಜಿ ಸ್ಪೋಟಕ ವಶಪಡಿಸಿಕೊಂಡ ಬೆನ್ನಿಗೇ ಈ ಕೃತ್ಯ ನಡೆದಿದ್ದು, ಘಟನೆ ನಡೆದು ಹಲವು ಗಂಟೆ ಕಳೆದರು ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
ಇಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಸುದ್ದಿವಾಹಿನಿ ಎಎನ್ಐ ವರದಿ ಅನ್ವಯ ದೆಹಲಿ ಪೊಲೀಸರ ಮೂಲಗಳ ಮಾಹಿತಿಯಂತೆ ನಿನ್ನೆ ನಡೆದ ಸ್ಪೋಟ ಅತ್ಮಾಹುತಿ ದಾಳಿ ಎನ್ನಲಾಗಿದೆ. ಆದರೆ ಇದು ಮೂಲಗಳ ಮಾಹಿತಿಯೇ ಹೊರತು ಸರ್ಕಾರದ ಅಧಿಕೃತ ಮಾಹಿತಿಯಲ್ಲ.
BIG🚨: Heartbreaking visuals emerge from the Delhi car blast—a Hyundai i20 torn apart, lives lost in seconds. 8 innocent souls gone. 💔
— vimal ojha (@vimalojha7) November 10, 2025
We demand justice and a thorough probe so such tragedies never repeat. 🙏#RedFort #delhiblast pic.twitter.com/B9fTYHNOvz
ಘಟನೆ ಕುರಿತು ಮಾಧ್ಯಮಗಳಿಗೆ ಮೂಲಗಳು ಹೇಳುತ್ತಿವೆ ಆದ್ರೂ, ಸರ್ಕಾರ ಅಧಿಕೃತವಾಗಿ ಏಕೆ ಹೇಳುತ್ತಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಾಥಮಿಕ ಮೂಲಗಳ ಪ್ರಕಾರ ದೆಹಲಿ ಕೆಂಪು ಕೋಟೆಗೆ ಹೊಂದಿಕೊಂಡಿರುವ ಮೆಟ್ರೋ ನಿಲ್ದಾಣದ ಟ್ರಾಫಿಕ್ ಸಿಗ್ನಲ್ ಬಳಿ ಸ್ಫೋಟ ಸಂಭವಿಸಿದೆ. ಸಂಜೆ 6.55ರ ಸುಮಾರಿಗೆ ರೆಡ್ ಸಿಗ್ನಲ್ ಬೀಳುತ್ತಿದ್ದಂತೆಯೇ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಈ ವೇಳೆ ಒಮ್ಮಿಂದೊಮ್ಮೆಗೆ ಭೀಕರ ಸ್ಪೋಟ ಸಂಭವಿಸಿದೆ.
ಸುಮಾರು 6 ಕಾರು, 3 ಆಟೋ ಸೇರಿ ಹಲವು ವಾಹನಗಳು ಬೆಂಕಿಯಿಂದ ಹೊತ್ತಿ ಉರಿದವು. ಸ್ಪೋಟದ ತೀವ್ರತೆಗೆ ಸಮೀಪದಲ್ಲಿದ್ದವರ ದೇಹಗಳು ಛಿದ್ರ ಛಿದ್ರವಾಗಿವೆ.
ಸದ್ಯದ ಮಾಹಿತಿ ಪ್ರಕಾರ 13 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿ ದ್ದಾರೆ. ಗಾಯಾಳುಗಳನ್ನು ಸ್ಥಳೀಯ ಜಯ ಪ್ರಕಾಶ್ ನಾರಾಯಣ ಆಸತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಗೆ ಕಾರಣ ಏನು..?
ಘಟನೆ ನಡೆದು ಹಲವು ಗಂಟೆಗಳು ನಡೆದರು ಈ ವರೆಗೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆಯೇ ಹೊರತು, ಅಧಿಕೃತವಾಗಿ ಘಟನೆಗೆ ಕಾರಣ ಏನು ಎಂಬುದನ್ನು ಹೇಳುತ್ತಿಲ್ಲ.
ಅಲ್ಲದೆ ಬಿಜೆಪಿ ಸಂಸದರು ಪಾಕಿಸ್ತಾನಕ್ಕೆ ಪಾಠ ಕಲಿಸುವ ಟ್ವೀಟ್ ಕೂಡ ಮಾಡಿಲ್ಲ. ಉಗ್ರರ ದಾಳಿ ಎನ್ನಲು ಈ ಬಾರಿ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆಯೇ..? ಏಕೆಂದರೆ ಹಲವು ಗಂಟೆಗಳು ಕಳೆದರು ಇದು ಉಗ್ರರ ಕೃತ್ಯ ಎಂದು ಹೇಳಲು ಏಕೆ ಸಾಧ್ಯವಾಗಿಲ್ಲ..? ಉಗ್ರರ ದಾಳಿ ಎಂಬುದನ್ನು ಮರೆಮಾಚಲು ಹಲವು ಗಂಟೆಗಳ ಕಾಲ ವಿಳಂಭ ಮಾಡಲಾಯಿತೇ..?
ಘಟನೆ ಕುರಿತು ಗೃಹಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ತನಿಖಾ ಸಂಸ್ಥೆಗಳು ಸ್ಥಳಕ್ಕೆ ತೆರಳಿದ್ದು, ಎಲ್ಲಾ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿವೆ ಎಂದಿದ್ದಾರೆ. ಆದರೆ ತನಿಖಾ ಸಂಸ್ಥೆಗಳು ಸ್ಥಳಕ್ಕೆ ತೆರಳಿ ಹಲವು ಗಂಟೆಗಳು ಕಳೆದರು ಕಾರಣ ಏನು ಎಂಬುದು ತಿಳಿದು ಬರುತ್ತಿಲ್ಲ..!
Pained beyond words by the loss of lives in a blast in Delhi. My deepest condolences to those who have lost their loved ones. Have visited the blast site and also met the injured in the hospital. My prayers for their quick recovery.
— Amit Shah (@AmitShah) November 10, 2025
Top agencies are investigating the incident…
ಏಕೆಂದರೆ ಈ ಮುಂಚೆ ದಾಳಿ ನಡೆದರೆ, ಪಾಕಿಸ್ತಾನಕ್ಕೆ ಪಾಠ ಕಲಿಸಲಾಗುವುದು, ನುಗ್ಗಿ ಹೊಡೆಯಲಾಗುವುದು ಎನ್ನಲಾಗುತ್ತಿದ್ದ ಪ್ರಚೋಧನಾಕಾರಿ ಮಾತುಗಳನ್ನು ಆಡುತ್ತಿದ್ದ ಬಿಜೆಪಿ ನಾಯಕರು, ಈಗ ಬಹಳ ಜಾಗೃತೆಯಿಂದ ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ಕುರಿತು ಮಾತನಾಡುತ್ತಿಲ್ಲ ಏಕೇ..? ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ನೆಟ್ಟಿಗರದ್ದಾಗಿದೆ.
ದೇಶಕ್ಕೆ ದೊಡ್ಡ ಸವಾಲು
ಈ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚುನಾವಣೆ ಪ್ರಚಾರದಲ್ಲಿ ಆಪರೇಷನ್ ಸಿಂಧೂರ ಮುಗ್ದಿಲ್ಲ, ಜಾರಿಯಲ್ಲಿದೆ ಎಂದಿದ್ದರು ಆದರೆ ಪಹಲ್ಗಾವ್ ದಾಳಿ ಬಳಿಕ ಈಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೊಡ್ಡಮಟ್ಟದ ಸ್ಪೋಟವಾಗಿದೆ. ಈ ಮೂಲಕ ದೇಶಕ್ಕೆ ದೊಡ್ಡ ಸವಾಲು ಎದುರಾಗಿದೆ.
ಮತ್ತೊಂದೆಡೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಉಳಿದ್ದ ಪಾಟ್ನಾದ ಖಾಸಗಿ ಹೋಟೆಲ್‌ನ ಲಿಫ್ಟ್‌ಗಳಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪತ್ರಿಕೆ ಹಾಗೂ ಟೇಪ್ ಬಳಿಸಿ ಮುಚ್ಚಿದ್ದು ಯಾರು..? ಎಂದು ಪವನ್ ಕೇರಾ ಪ್ರಶ್ನೆ ಮಾಡಿದ್ದಾರೆ.
ಏಕೆಂದರೆ ಗೃಹಸಚಿವರು ಉಳಿದಿದ್ದ ಹೋಟೆಲ್ ಸಿಸಿ ಟಿವಿ ಕ್ಯಾಮೆರಾ ಮುಚ್ಚಲು ಕಾರಣವೇನು..? ತನಿಖಾ ಸಂಸ್ಥೆಗಳು ಏನ್ ಮಾಡ್ತಾ ಇದ್ದವು, ಅವರಿಗೆ ಇದು ಗಮನಕ್ಕೆ ಬರಲಿಲ್ಲ..? ಗೃಹ ಸಚಿವರ ಭದ್ರತೆ ಅತಿ ಸೂಕ್ಷ್ಮ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ನವೆಂಬರ್ 10 ರಂದು ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ದೇಶದ ಗೃಹಸಚಿವರಿಗೆ ಯಾವುದೇ ಕೆಲಸ ಇಲ್ಲವೇ. ? ಅವರು ಹಲವು ದಿನಗಳ ಕಾಲ ಬಿಹಾರದಲ್ಲಿಯೇ ಚುನಾವಣೆ ಕಾರಣ ಉಳಿದಿದ್ದಾರೆ ಎಂದು ಲೇವಡಿ ಮಾಡಿದ್ದರು.
ಪಹಲ್ಗಾವ್ ದಾಳಿ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಗೃಹಸಚಿವ ಅಮಿತ್ ಶಾ ಅಲ್ಲಿ ಕಂಡದ್ದು, ಅಧಿಕಾರಿಗಳಿಂದ ಪಡೆದ ಮಾಹಿತಿ ಮಾಧ್ಯಮಗಳಿಗೆ ತಿಳಿಸಲಿಲ್ಲ. ಈ ಉತ್ತರ ಗೃಹಸಚಿವರು ನೀಡಬೇಕಿದೆ. ಆದರೆ ಇವರನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ.
ದೇಶಾದ್ಯಂತ ಪ್ರಿಯಾಂಕ್ ಖರ್ಗೆ ಟ್ವೀಟ್ ಸದ್ದು
ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಯಾರು ಹೇಳಲು ಧೈರ್ಯ ಮಾಡದ ಮಾತೊಂದು ಹೇಳಿದ್ದು, ದೇಶಾದ್ಯಂತ ಸದ್ದು ಮಾಡುತ್ತಿದೆ.
ಪ್ರಿಯಾಂಕ್ ಅವರು ಗೌರವಾನ್ವಿತ ಗೃಹಸಚಿವರಾದ ಅಮಿತ್ ಶಾ ಅವರ ಅವಧಿಯಲ್ಲಿ ಇಲ್ಲಿಯವರೆಗೆ
ವಿಫಲವಾದ ಕಾಶ್ಮೀರ, ವಿಫಲವಾದ ಮಣಿಪುರ, ವಿಫಲವಾದ ದಿಲ್ಲಿ, ವಿಫಲವಾದ ಪುಲ್ವಾಮಾ,
ವಿಫಲವಾದ ಪಹಲ್ಗಾಮ್ ಮತ್ತು ದೇಶವನ್ನು ವಿಫಲಗೊಳಿಸಿದ್ದಾರೆ.
ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹಲವು ಕುಸಿತಗಳನ್ನು ಕಂಡರು ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಅಧಿಕಾರದಲ್ಲಿರುವ ಯಾವುದೇ ಗೃಹ ಸಚಿವರು ಬಹುಶಃ ಎಂದಿಗೂ ಇರಲಿಲ್ಲ.
ಇದು ನಮ್ಮ ಆಂತರಿಕ ಭದ್ರತೆಯನ್ನು ವಹಿಸಿಕೊಂಡಿರುವವರ ಸಂಪೂರ್ಣ ವೈಫಲ್ಯ. ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸುವ ಬದಲು, ಬಿಜೆಪಿಯ ಸಂಪೂರ್ಣ ಆನ್‌ಲೈನ್ ಟೂಲ್‌ಕಿಟ್ ಅತಿ ವೇಗದಲ್ಲಿ ದಿಕ್ಕು ತಪ್ಪಿಸುತ್ತಿದೆ.
Mananiya HM @AmitShah has so far:
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 11, 2025
Failed Kashmir
Failed Manipur
Failed Delhi
Failed Pulwama
Failed Pahlgam
Failed UP
And failed the country
There has perhaps never been a Home Minister in India whose tenure has seen so many breakdowns of law and order and yet continues to hold…
ಗೃಹಸಚಿವ ಸ್ಥಾನದಿಂದ ಅಮಿತ್ ಶಾ ಅವರನ್ನು ಕಿತ್ತೊಗೆಯಲು ಸಾಧ್ಯವಾಗದೆ ಇರುವ ಒಂದೇ ಕಾರಣವೆಂದರೆ ಅವರು ಪ್ರಧಾನಿ ಮೋದಿಯವರ ಮೇಲೆ ಬಲವಾದ ‘ನಿಯಂತ್ರಣ’ ಹೊಂದಿದ್ದಾರೆ.
ನಿಜವಾಗಿಯೂ ಮರೆಮಾಡಲು ಏನೂ ಇಲ್ಲದಿದ್ದರೆ, ಪ್ರಧಾನಿ ಅದನ್ನು ತೋರಿಸಲಿ. ಕ್ರಮ ಕೈಗೊಳ್ಳಿ. ಗೃಹ ಸಚಿವರನ್ನು ಹೊಣೆಗಾರರನ್ನಾಗಿ ಮಾಡಿ. ಅವರನ್ನು ವಜಾಗೊಳಿಸಿ ಎಂದು ಒತ್ತಾಯಿಸಿದ್ದಾರೆ. ಆದರೆ ಗೋದಿ ಮೀಡಿಯಾ ಈ ಕುರಿತು ಮಾತಾಡುತ್ತಿಲ್ಲ.
ಭಾರಿ ಪ್ರಮಾಣದ ಸ್ಪೋಟಕ ವಶ
ನ.10ರ ಬೆಳಗ್ಗೆಯಿಂದಲೇ ಜಮ್ಮು ಕಾಶ್ಮೀರ ಪೊಲೀಸರು ಸೂಚನೆ ಅನ್ವಯ ಫರಿದಾಬಾದ್ ನಲ್ಲಿ 350 ಕೆಜಿ RDX, AK 47 ವಶ ಪಡಿಸಿಕೊಳ್ಳಲಾಗಿದ್ದು, ಲಕ್ನೋದಲ್ಲೂ ಇದೇ ರೀತಿ ವಶ ಪಡಿಸಿಕೊಂಡಿರುವ ಕುರಿತು ವರದಿಯಾಗಿತ್ತು. ಅನೇಕರ ಬಂಧನವಾಗಿತ್ತು.
ಇಷ್ಟು ದೊಡ್ಡಮಟ್ಟದ ಸ್ಪೋಟಗಳು ದೆಹಲಿ ಸಮೀಪಕ್ಕೆ ಬಂದಿದ್ದು ಹೇಗೆ..? ಈ ಬಂಧನದ ಬಳಿಕವೂ ದೆಹಲಿಯಲ್ಲಿ ಸ್ಪೋಟ ನಡೆದಿದ್ದು ಹೇಗೆ..? ಇದೇನಾ ಮುಂಜಾಗ್ರತೆ..?
ಈ ವರೆಗೆ ಪುಲ್ವಾಮಾ ದಾಳಿಗೆ ಬಳಸಲಾದ RDX ಹೇಗೆ ಬಂತು..? ಎಂಬುದಕ್ಕೆ ಉತ್ತರ ದೊರಕಿಲ್ಲ. ಈ ಪ್ರಶ್ನೆ ಕೇಳುತ್ತಲೇ ಸತ್ಯ ಪಾಲ್ ಮಲ್ಲಿಕ್ ನಿಧನ ಹೊಂದಿದ್ದಾರೆ. ಆದರೆ ಉತ್ತರ ಮಾತ್ರ ದೊರಕಿಲ್ಲ. ಇದರ ಬಳಿಕವೂ ಇಷ್ಟು ದೊಡ್ಡಮಟ್ಟದ ಸ್ಪೋಟಕಗಳು ಬರುತ್ತಿರುವುದು ಎಲ್ಲಿಂದ..?
ನಿನ್ನೆ ನವದೆಹಲಿಯಲ್ಲಿ ನಡೆದ ಸ್ಪೋಟಕ್ಕೆ ಬಳಸಿದ್ದ ಕಾರಿನ ಕುರಿತು ಮಾಹಿತಿ ಪತ್ತೆಯಾಗಿದೆ. ಆದರೆ ಸ್ಪೋಟಕ್ಕೆ ಕಾರಣ ಏನು..? ಬಳಸಲಾದ ಕಾರಿನಲ್ಲಿ ಏನಿತ್ತು..? ಅದರಲ್ಲಿ ಯಾರಿದ್ದರು ಎಂಬುದು, ಮೂಲಗಳ ವರದಿ ಎಂದು ಮಾಧ್ಯಮಗಳು ಹೇಳಿದ್ದು ಬಿಟ್ಟರೆ, ಇಂದು ಮಧ್ಯಾಹ್ನದ ವರೆಗೂ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.
ದೆಹಲಿಯಲ್ಲಿ ನಡೆದ ಘಟನೆಯಲ್ಲಿ 11 ಮಂದಿ ಸಾವನಪ್ಪಿ, ಅನೇಕರು ಗಾಯಗೊಂಡಿದ್ದಾರೆ. ಅವರ ಕುಟುಂಬಸ್ಥರ ಆಕ್ರಂದನ ನೋಡಲು ಸಾಧ್ಯವಾಗುತ್ತಿಲ್ಲ. ಒಂದು ರಾತ್ರಿಯಲ್ಲಿ ಅವರ ಜೀವನದ ಪರಿಸ್ಥಿತಿ ಬದಲಾಗಿ ಹೋಗಿದೆ. ಆದಾಗ್ಯೂ ಗೋದಿ ಮೀಡಿಯಾ ಯಾಂಕರ್ಗಳ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ಘಟನೆ ಕುರಿತು ಇವರು ಗೃಹಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುತ್ತಿಲ್ಲ.
ಗುಪ್ತಚರ ಇಲಾಖೆಯ ವೈಪಲ್ಯವಲ್ಲವೇ..?
ಈ ಎಲ್ಲಾ ಮಾಹಿತಿ ಕಂಡಾಗ ಕಂಡುಬರುತ್ತಿರುವುದು, ಇದು ಗುಪ್ತಚರ ಇಲಾಖೆ ವೈಪಲ್ಯವಲ್ಲದೇ ಮತ್ತೇನು..? ಗುಪ್ತಚರ ಇಲಾಖೆಯ ವೈಫಲ್ಯದ ಹೊಣೆ ಹೊರುವವರು ಯಾರು.? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಪ್ರಧಾನಿ ಮೋದಿ ಭೂತಾನ್ ಪ್ರವಾಸ
ದೆಹಲಿ ಘಟನೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ತೆರಳಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಸಂಭವಿಸಿದ ಪಹಲ್ಗಾವ್ ದಾಳಿಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಮೋದಿ ಪ್ರವಾಸ ಮೊಟಕುಗೊಳಿಸಿ ದೇಶಕ್ಕೆ ಹಿಂತಿರುಗಿದ್ದರು. ಆದರೆ ಬಳಿಕ ಅವರು ತೆರಳಿದ್ದು, ಪಹಲ್ಗಾವ್ ಅಲ್ಲದೆ ಬಿಹಾರದ ಮಧುವನಿಯಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ.
ಮೇ.10 ರಂದು ಆಪರೇಷನ್ ಸಿಂಧೂರ ಕದನ ವಿರಾಮ ಘೋಷಣೆಯ 18 ದಿನಗಳ ಬಳಿಕ ಪ್ರಧಾನಿ ಮೋದಿ ಅವರು ಪಾಟ್ನಾದಲ್ಲಿ ನಡೆದ ರೋಡ್ ಶೋದಲ್ಲಿ ಭಾಗಿಯಾದರು. ಆದರೆ ಅಲ್ಲಿ ಜನ ಬೆಂಬಲ ಸಿಗದೆ ಇದ್ದ ಕಾರಣ ಕೆಲ ದಿನಗಳಲ್ಲೇ ಆಪರೇಷನ್ ಸಿಂಧೂರ ವಿಜಯ ಅಭಿಯಾನವನ್ನು ಏಕಾಏಕಿ ಮೊಟಕುಗೊಳಿಸಲಾಯಿತು.
ಇದರ ಬೆನ್ನಲ್ಲೇ ಅಮೇರಿಕಾದ ಅಧ್ಯಕ್ಷ, ಮೋದಿ ಮಿತ್ರ ಡೋನಾಲ್ಡ್ ಟ್ರಂಪ್ ಆಪರೇಷನ್ ಸಿಂಧೂರ ಕದನ ವಿರಾಮದ ಕ್ರೆಡಿಟ್ ಪಡೆಯಲು ಆರಂಭಿಸಿದರು, ಸತತ 53 ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಕಾರಣ ನಾನೇ ಎಂದು ಟ್ರಂಪ್ ಹೇಳಿದರು, ಪ್ರಧಾನಿ ಮೋದಿ ತಿರುಗೇಟು ನೀಡಲಿಲ್ಲ ಎಂಬುದು ತೀವ್ರ ಚರ್ಚೆಗೆ ಗುರಿಯಾಗಿದೆ.
ಬಿಹಾರ ಚುನಾವಣೆ
ಇಂದು ಬಿಹಾರದ ಎರಡನೇ ಹಂತದ ಚುನಾವಣೆ ನಡೆದಿದೆ. ಇದಕ್ಕೆ ಕೆಲ ಗಂಟೆಗಳ ಮುಂಚೆ ದೆಹಲಿಯಲ್ಲಿ ಕಾರು ಸ್ಪೋಟಗೊಂಡು ಹಲವರು ಸಾವನಪ್ಪಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಭೂತಾನ್ ಪ್ರವಾಸಕ್ಕೆ ತೆರಳಿದ್ದಾರೆ.
ಪ್ರಧಾನಿ ಮೋದಿ ಅವರು, ಭೂತಾನ್ ರಾಜಧಾನಿ ಥಿಂಪುವಿನ ಚಾಂಗ್ಲಿಮೆಥಾಂಗ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬದ್ಧನಾಗಿದ್ದರೂ, “ಭಾರವಾದ ಹೃದಯ”ದಿಂದ ಬಂದಿದ್ದಾಗಿ ಹೇಳಿದರು.
ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ತನಿಖೆ ನಡೆಸುವ ಸಂಸ್ಥೆಗಳೊಂದಿಗೆ ಸೋಮವಾರ ರಾತ್ರಿಯ ಹೆಚ್ಚಿನ ಸಮಯವನ್ನು ಸಮನ್ವಯಗೊಳಿಸುವಲ್ಲಿ ಕಳೆದಿದ್ದೇನೆ ಎಂದು ಹೇಳಿದರು.
The horrific blast in Delhi last evening has deeply pained everyone. India stands with those who have suffered.
— Narendra Modi (@narendramodi) November 11, 2025
I assure everyone that the agencies will get to the bottom of the entire conspiracy.
All those involved will be brought to justice. pic.twitter.com/gwFzSVwD2Q
“ನಾನು ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರ ಹೃದಯಗಳನ್ನು ನೋಯಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗುತ್ತದೆ. ಇಂದು, ಇಡೀ ದೇಶವು ಅವರೊಂದಿಗೆ ನಿಂತಿದೆ” ಎಂದು ಮೋದಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು.
“ನಮ್ಮ [ತನಿಖಾ] ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆ. ಇದರ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ” ಎಂದು ಅವರು ಹೇಳಿದರು.
ನೆಟ್ಟಿಗರ ಆಕ್ಷೇಪ
ಇನ್ನೂ ದೆಹಲಿ ಸ್ಪೋಟದ ಘಟನೆ ನಡುವೆ ಪ್ರಧಾನಿ ಮೋದಿ ಅವರ ಭೂತಾನ್ ಪ್ರವಾಸವನ್ನು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
BREAKING 🚨 PM Narendra Modi leaves for Bhutan.
— Shruti Dhore (@ShrutiDhore) November 11, 2025
Who died or who will die, what do I have to do with it, I am going to Bhutan.#RedFort "Red Fort Metro Station"#Dharmendra pic.twitter.com/qzPS1JShva
ಘಟನೆಗೆ ಕಾರಣವೇನು..?
ತನಿಖಾ ಸಂಸ್ಥೆಗಳು ತೀವ್ರ ತಪಾಸಣೆ ನಡೆಸಿದರು ಘಟನಗೆ ಕಾರಣ ಏನು..? ಇದರ ಹಿಂದೆ ಇರುವವರು ಯಾರು..? ಎಂಬುದಕ್ಕೆ ಉತ್ತರ ಸಿಕ್ಕಿಲ್ಲವೆ..?
ಈ ಕೃತ್ಯದ ಹಿಂದೆ ಯಾರೇ ಇದ್ದರು ಅವರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಆದರೆ ಯಾರ ಬೇಜವಬ್ದಾರಿಯಿಂದ ಈ ಘಟನೆ ನಡೆದಿದೆ..? ದೆಹಲಿ ಘಟನೆಗೂ ಮುನ್ನ ನಡೆದ ಪಹಲ್ಗಾವ್ ದಾಳಿಯ ಬಳಿಕ ಯಾರ ವಿರುದ್ಧ ಆದರೂ ಕ್ರಮಕೈಗೊಳ್ಳಲಾಗಿದೆಯೇ..?
ಇಂಟಲಿಜೆನ್ಸ್ ಮಾಹಿತಿ
ಮಾಧ್ಯಮಗಳ ವರದಿಯಂತೆ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿದ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದಾರೆಂಬ ಮಾಹಿತಿ ಗುಪ್ತಚರ ಇಲಾಖೆಗೆ ದೊರೆತಿದೆ ಎಂಬುದಾಗಿದೆ. ಈ ಕುರಿತಂತೆ ಹಲವರ ಬಂಧನ, ಸ್ಪೋಟಕ ವಶ ನಡೆಯುತ್ತಲೇ ಇತ್ತು. ಆದಾಗ್ಯೂ ದೆಹಲಿಯಲ್ಲಿ ಸ್ಪೋಟ ಸಂಭವಿಸಿದೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯಂತೆ ಘಟನೆಗೆ ಕಾರಣವಾದವರನ್ನು ಸುಮ್ಮನೆ ಬಿಡಲ್ಲ ಎಂದಿದ್ದಾರೆ. ಆದರೆ ಘಟನೆಗೆ ಕಾರಣ ಯಾರು ಎಂಬ ಪ್ರಶ್ನೆ ಎದುರಾಗಿದೆ..? ಉತ್ತರ ದೊರಕಿಲ್ಲ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.