ದೊಡ್ಡಬಳ್ಳಾಪುರ: ಇತ್ತೀಚೆಗೆ ನಡೆದ ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (TAPMCS) ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಬೆಂಬಲಿತರನ್ನು ನಗರದ ಜೆಡಿಎಸ್ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಅವರು ಸನ್ಮಾನಿಸಿದರು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ವಿಜೇತರಾದ ಪುರುಷೋತ್ತಮ್, ಕೊನಘಟ್ಟ ಆನಂದ್ ಹಾಗೂ ಲಕ್ಷ್ಮೀ ನಾಗೇಶ್ ಅವರನ್ನು ಈ ವೇಳೆ ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಜಿಲ್ಲಾ ಜೆಡಿಎಸ್ ವಕ್ತಾರೆ ಶಶಿಕಲಾ, ತಾಲೂಕು ವಕ್ತಾರ ಕುಂಟನಹಳ್ಳಿ ಮಂಜುನಾಥ್, ನಗರಸಭೆ ಸದಸ್ಯರಾದ ತ.ನ.ಪ್ರಭುದೇವ, ವಡ್ಡರಹಳ್ಳಿ ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸವರಾಜು, ತೂಬಗೆರೆ ಹೋಬಳಿ ಅಧ್ಯಕ್ಷ ಜಗನಾಥ ಚಾರ್, ಮುಖಂಡರಾದ ಕೃಷ್ಣಪ್ಪ, ವಿಶ್ವನಾಥ್, ಮುದ್ದಣ, ನಾರಾಯಣಪ್ಪ, ತಳಗವಾರ ನಾಗರಾಜ್, ಹರ್ಷ ಮತ್ತಿತರರು.