ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ(TAPMCS) ನ.2 ರಂದು ನಡೆದಿದ್ದ ಚುನಾವಣಯಲ್ಲಿ ‘ಎ’ ತರಗತಿಯ ಫಲಿತಾಂಶವನ್ನು ಹೈಕೋರ್ಟ್ ಆದೇಶದಂತೆ ಅಧಿಕೃತವಾಗಿ ಘೋಷಣೆ ಮಾಡದೆ ತಡೆಯಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಮತಗಳ ಎಣಿಕೆ ನಡೆಸಿ ಗುರುವಾರ ಅಧಿಕೃತವಾಗಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ ಎಂದು ಚುನಾವಣ ಅಧಿಕಾರಿ ಆರ್.ರಾಮಾಂಜಿನೇಯ ತಿಳಿಸಿದ್ದಾರೆ.
ನಿನ್ನೆ ಪ್ರಕಟವಾಗಿರುವ ಟಿಎಪಿಎಂಸಿಎಸ್ ನ ‘ಎ’ ತರಗತಿ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ಕು ಜನ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಬೆಂಬಲಿತ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
‘ಎ’ ತರಗತಿಯಿಂದ ಆಯ್ಕೆಯಾದವರು
ಡಿ.ಸಿದ್ದರಾಮಯ್ಯ: 13 (ಕಾಂಗ್ರೆಸ್)
ಎನ್.ಜಗನ್ನಾಥ್: 12 (ಕಾಂಗ್ರೆಸ್)
ಎಂ.ವೆಂಕಟೇಶ್: 12 (ಕಾಂಗ್ರೆಸ್)
ಎಂ.ಗೋವಿಂದರಾಜು: 11 (ಕಾಂಗ್ರೆಸ್)
ಕೆ.ಎಂ.ಅಂಬರೀಶ್; 10 ( ಬಿಜೆಪಿ+ಜೆಡಿಎಸ್ ಮೈತ್ರಿ)