ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿನ (Prasanna Venkataramana Swamy Temple) ಹುಂಡಿ ಕಾಣಿಕೆ ಕಳುವಿಗೆ ವಿಫಲ ಯತ್ನ ನಡೆದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಗುರುವಾರ ಮಧ್ಯ ರಾತ್ರಿ ದೇವಾಲಯದ. ಎಡಭಾಗದಲ್ಲಿನ ಗೇಟ್ ಬೀಗ ಮುರಿದಿರುವ ಕಳ್ಳನೋರ್ವ ದೇವಾಲಯದ ಒಳಗೆ ನುಗ್ಗಿದ್ದು, ಹುಂಡಿಯ ಬೀಗ ಮುರಿಯಲು ಯತ್ನಿಸಿದ್ದಾನೆ.
ಸುಮಾರು 1.50 ರಿಂದ 2.40 ರ ವರೆಗೆ ಹುಂಡಿ ಬೀಗ ಮುರಿಯಲು ಯತ್ನಿಸಿದ್ದು, ಸಾಧ್ಯವಾಗದೆ ತೆರಳಿದ್ದಾನೆ.
ಘಟನೆ ಕುರಿತಂತೆ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೇ ನಡೆಸಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಳ್ಳನ ಚಲನವಲನ ಸೆರಯಾಗಿದೆ ಎನ್ನಲಾಗುತ್ತಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.