Astrology: There is a possibility of making profits in business

ದಿನ ಭವಿಷ್ಯ: ಈ ರಾಶಿಯವರ ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ ಎಚ್ಚರ

Astrology: ಬುಧವಾರ, ಡಿಸೆಂಬರ್ 03, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ನಿಮ್ಮ ಮಕ್ಕಳು ನಿಮಗೆ ಸಹ ಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆ ಲ್ಲಾ ಹಾಲು ಎಂದು ನಂಬಿ ಮೋಸ ಹೋ ಗದಿರಿ. ನಿರ್ದಿಷ್ಟ ಗುರಿ ಯನ್ನು ತಲುಪಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಗ್ರಾಮ ದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ

ಪ್ರತಿನಿತ್ಯ ಕಛೇರಿ ಓಡಾಟ ಇದ್ದದ್ದೇ. ಆದರೆ ಅವುಗಳ ಮಧ್ಯೆಯೇ ಜೀವಿಸಿ ಅವುಗಳನ್ನು ಮೆಟ್ಟಿ ನಿಲ್ಲುವುದೇ ಜೀವನದ ಆಟ. ಕೆಲಸ ಕಾರ್ಯಗಳು ಮಂದ ಪ್ರಗತಿಯಲ್ಲಿ ಸಾಗಿದರೂ ಗುರುವಿನ ಶುಭ ಸಂಚಾರದಿಂದಾಗಿ ಅಂತಿಮವಾಗಿ ಶುಭಫಲ ಕಾಣುವಿರಿ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ನಿಮ್ಮ ಮನಸ್ಸಿಗೆ ಬೇಡವಾದ ಘಟನೆಗಳು ಜರುಗುವುದರಿಂದ ಮಾನಸಿಕ ತಲ್ಲಣ ಉಂಟಾಗಬಹುದು, ಜಾಗರೂಕರಾಗಿರಿ. ನಿಮಗೆ ಹಣಕಾಸಿನ ನೆರವು ದೊರೆಯು ವುದು ಮತ್ತು ಕುಟುಂಬ ವರ್ಗದವರ ಸಹಕಾರವೂ ದೊರೆಯುವ ಯೋಗವಿದೆ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇ ಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ದಿನ ನಿತ್ಯದ ಕೆಲಸಗಳು ಇದ್ದೇ ಇರುತ್ತದೆ. ಆದರೆ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಪ್ರಶಸ್ತವಲ್ಲ. ಜ್ಞಾನಕಾರಕ ಗುರುವನ್ನು ಆರಾಧಿಸುವುದ ರಿಂದ ಒಳಿತಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ

ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಮನೆ ಬದಲಿಸುವ ಸಂಗತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ವ್ಯಾಪಾರ ವ್ಯವಹಾರಗಳಿಗೆ ಇದು ಸಕಾಲ ದಿನ. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ

ನಿಮ್ಮ ಸಾಮಾಜಿಕ ಕಾಳಜಿ ಯನ್ನು ಜನ ಕೊಂಡಾಡುವರು. ಹಣಕಾಸಿ ನ ಸ್ಥಿತಿ ಉತ್ತಮವಾಗಿರುತ್ತದೆ , ಕಿರಿಕಿರಿ ಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಏಕಾಂತ ಸ್ಥಳಕ್ಕೆ ಹೋಗಿ ಮನಸ್ಸಿನ ನೆಮ್ಮದಿ ಕಂಡುಕೊಳ್ಳಿ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ

ನಿರಾಶಾದಾಯಕ ನಡವಳಿಕೆ ಇಂದಾಗಿ ನೀವು ಯಾವುದೇ ಪ್ರಗತಿಯ ನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿಯನ್ನು ಕುಂಠಿತ ಗೊಳಿಸಿದೆಯಂದು ಕಂಡುಕೊಳ್ಳ ಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. (ಭಕ್ತಿಯಿಂದ ಶ್ರೀ ಕುಲ ದೇವತೆ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ಅಧಿಕ ಭಾವನೆಗಳು ನಿಮ್ಮ ದಿನವನ್ನು ನಾಶ ಮಾಡಬಹುದು. ವಿಶೇಷ ವಾಗಿ ನೀವು ನಿಮ್ಮ ಪ್ರೀತಿ ಪಾತ್ರರು ಇತರ ರೊಂದಿಗೆ ತುಂಬಾ ಸ್ನೇಹದಿಂದಿರುವುದ ನ್ನು ಕಂಡಾಗ, ಎಲ್ಲರಿಗೂ ಅಸೂಯೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಧನಸ್ಸು ರಾಶಿ

ದೂರ ಸಂಚಾರದಿಂದ ದೇಹಾಯಾಸವಾದೀತು. ವೃತ್ತಿರಂಗದಲ್ಲಿ ಸಮಾಧಾನಕರವಲ್ಲದ ವಾತಾವರಣ. ವಿದ್ಯಾರ್ಥಿಗಳಿಗೆ ವಿದ್ಯಾ ಲಾಭ ಉತ್ಸಾಹ ತರಲಿದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ವಾದ ವಿವಾದಗಳಿಗೆ ಕಾರಣರಾಗದಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಸಾಂಸಾರಿಕವಾಗಿ ನೆಮ್ಮದಿ, ಶಾಂತಿ, ಸಮಾಧಾನ ತರಲಿದೆ. ನಿಂತ ಕೆಲಸ ಕಾರ್ಯಗಳನ್ನು ಚಾಲನೆ ಗೊಳಿಸಿರಿ. (ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ

ಅಧಿಕ ಬಂಡವಾಳ ತೊಡಗಿಸಲು ಶತಪ್ರಯತ್ನ ನಡೆಸುತ್ತಿದ್ದೀರಿ. ಯಾವುದಕ್ಕೂ ಮಿತಿ ಇರಲಿ, ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಯಶಸ್ಸು. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸ ಉಂಟಾಗಬಹುದು. ಸರ್ಕಾರಿ ಕೆಲಸಗಳಿಗೆ ಅಲೆದಾಡುವ ಸಾಧ್ಯತೆ ಕಂಡುಬರುವುದು. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ಮೀನ ರಾಶಿ

ಅತಿಯಾದ ಉತ್ಸಾಹದಿಂದ ವೃತ್ತಿ ಜೀವನದಲ್ಲಿ ಹೊಸ ತಿರುವು. ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸ ಬಲ್ಲಿರಿ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ ಕಂಡುಬರುವುದು. ದೇವತಾ ದರ್ಶನ ಭಾಗ್ಯವಿದೆ. ಮಕ್ಕಳೊಂದಿಗೆ ಸಂತಸದ ದಿನವಾಗಿರುವುದು.ಬಂಧು ಮಿತ್ರರ ಆಗಮನ ಸಾಧ್ಯತೆಯೂ ಕಂಡುಬರುವುದು. (ಭಕ್ತಿಯಿಂದ ಶ್ರೀ ಅಷ್ಟ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ತೃತೀಯ
ನಕ್ಷತ್ರ: ಭರಣಿ ನಕ್ಷತ್ರ.

ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಬಿ.ಮುನೇಗೌಡ ಭರ್ಜರಿ ಪ್ರಚಾರ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಬಿ.ಮುನೇಗೌಡ ಭರ್ಜರಿ ಪ್ರಚಾರ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ ಸೋಮವಾರದಿಂದ ಜೆಡಿಎಸ್ (JDS) ಅಭ್ಯರ್ಥಿಗಳ ಪರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ (B. Mune Gowda) ಅವರು ಮತಯಾಚನೆಗೆ ಚಾಲನೆ ನೀಡಿದ್ದಾರೆ.

[ccc_my_favorite_select_button post_id="117387"]
ಹಿರಿಯ ಶಾಸಕ ಶಾಮಾನೂರು ಶಿವಶಂಕರಪ್ಪ ನಿಧನ

ಹಿರಿಯ ಶಾಸಕ ಶಾಮಾನೂರು ಶಿವಶಂಕರಪ್ಪ ನಿಧನ

ರಾಜ್ಯ ಕಾಂಗ್ರೆಸ್ ನ ದಾವಣಗೆರೆ ಮೂಲದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ವಿಧಿವಶರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

[ccc_my_favorite_select_button post_id="117359"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕಬ್ಬಡಿ ಚಾಂಪಿಯನ್ ಶಿಪ್; ಕರ್ನಾಟಕಕ್ಕೆ ಕಂಚಿನ ಪದಕ.. ದೊಡ್ಡಬಳ್ಳಾಪುರದ ಹರೀಶ್ ಭಾಗಿ

ಕಬ್ಬಡಿ ಚಾಂಪಿಯನ್ ಶಿಪ್; ಕರ್ನಾಟಕಕ್ಕೆ ಕಂಚಿನ ಪದಕ.. ದೊಡ್ಡಬಳ್ಳಾಪುರದ ಹರೀಶ್ ಭಾಗಿ

ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ಜಾಲ್ಗೊಂನ್ ನಲ್ಲಿ ನಡೆದ 5ನೇ ಫೆಡರೇಶನ್ ಕಪ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ (Kabbadi Championship) ಭಾಗವಹಿಸಿದ ಕರ್ನಾಟಕದ ಕಬ್ಬಡಿ ತಂಡ ಕಂಚಿನ

[ccc_my_favorite_select_button post_id="117398"]
ದೊಡ್ಡಬಳ್ಳಾಪುರ: ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಕಳ್ಳತನ..! CCTV Video ನೋಡಿ

ದೊಡ್ಡಬಳ್ಳಾಪುರ: ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಕಳ್ಳತನ..! CCTV Video ನೋಡಿ

ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿನ ಹಾಡೋನಹಳ್ಳಿಯ ಚೌಡೇಶ್ವರಿ ದೇವಸ್ಥಾನದಲ್ಲಿ (Chowdeshwari Temple) ಮತ್ತೆ ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

[ccc_my_favorite_select_button post_id="117382"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]