Astrology: There is a possibility of making profits in business

ದಿನ ಭವಿಷ್ಯ: ಈ ರಾಶಿಯವರಿಂದು ತಾಳ್ಮೆಯಿಂದಿರಲು ಪ್ರಯತ್ನಿಸಿ

Astrology: ಗುರುವಾರ, ಡಿಸೆಂಬರ್ 04, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢ ನಿರ್ಧಾರ ಕೈಗೊಳ್ಳಿ. ದೀರ್ಘಾವಧಿ ಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ

ಹೊಸ ವ್ಯಾಪಾರ- ವಹಿವಾಟು ಗಳ ಕುರಿತು ಭಯ ಬೇಡ. ಮುಂದೆ ಹೆಜ್ಜೆ ಇಡಿ. ನಿಮ್ಮ ಸಹಾಯವನ್ನು ಅರಸಿ ಬರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ಇತರರ ಹಿತಾಸಕ್ತಿ ಗಳಂತೆ ನೀವು ಕೆಲಸ ಮಾಡಲು ಸಾಧ್ಯವಿಲ್ಲ. ವೃತ್ತಿಯಲ್ಲಿ ಕೆಲಸ ಬೇಸರಗಳು ಎದುರಾಗ ಬಹುದು ಕುಗ್ಗದಿರಿ. ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ.(ಭಕ್ತಿಯಿಂದ ಸಾಲಿ ಗ್ರಾಮ ಸ್ವರೂಪ ಶ್ರೀ ಮಹಾ ವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ವೃತ್ತಿಪರ ವ್ಯವಹಾರ ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಜವಾಬ್ದಾರಿಗಳ ಉತ್ತಮ ನಿಭಾವಣೆ ಯಿಂದಾಗಿ ಇತರರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಮಹಾಗಣಪತಿ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ಸಿಂಹ ರಾಶಿ

ಇತರರನ್ನು ಮೆಚ್ಚಿಸುವ ನಿಮ್ಮ ಸಾಮರ್ಥ್ಯವು ಪ್ರತಿಫಲವನ್ನು ತರುತ್ತದೆ. ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರುತ್ತದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ನಿಮ್ಮ ತುಟಿಗಳಲ್ಲಿ ಕಿರುನಗೆ ಇರಲಿ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)

ಕನ್ಯಾ ರಾಶಿ

ವೈಯಕ್ತಿಕ ಜೀವನದ ಕಡೆಗೂ ಗಮನವಿರಲಿ. ಸದಾಕಾಲ ವ್ಯಾಪಾರ ವಹಿವಾಟುಗಳಲ್ಲೇ ಕಾರ್ಯನಿರತ ರಾಗಿರುತ್ತೀರಿ. ಕುಟುಂಬಸ್ಥರೊಂದಿಗೂ ಕಾಲ ಕಳೆಯಲು ಪ್ರಯತ್ನ ಮಾಡಿ.(ಭಕ್ತಿಯಿಂದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ

ತಪ್ಪುಗಳನ್ನು ಒಪ್ಪಿಕೊಂಡು ಬಿಡಿ ಶಾಂತಿಯುತ ಜೀವನ ನಿಮ್ಮದಾಗ ಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ಸ್ಥಾನಮಾನದ ಬಯಕೆ ಈಡೇರಲಿದೆ. ಆದರೆ, ಅದೃಷ್ಟದಿಂದ ಎಲ್ಲವೂ ಸಾಧ್ಯವಿಲ್ಲ.ನಿಮ್ಮ ಪರಿಶ್ರಮ ಕೂಡ ಮುಖ್ಯವಾಗುತ್ತದೆ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ

ಆತ್ಮವಿಶ್ವಾಸ ವಿರಲಿ. ನೀವು ಕೈಹಾಕುವ ಕೆಲಸಗಳು ಕಾರ್ಯಸಾಧ್ಯ ವಾಗಲಿದೆ. ಆದರೆ ಒತ್ತಡ ಜೀವನದಿಂದ ದೂರ ಇರಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ಈ ದಿನ ನಿಮ್ಮ ಬಹುತೇಕ ಗಮನ ವ್ಯಾಪಾರ ಹಾಗೂ ವ್ಯವಹಾರಗಳ ಮೇಲಿರಲಿದೆ. ಉದ್ಯೋಗಗಳನ್ನು ಹುಡುಕುತ್ತಿರುವವರು ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು.(ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ

ಮಕ್ಕಳ ಮೇಲೆ ಹೆಚ್ಚಿನ ಕಾಳಜಿವಹಿಸಿ. ನಿಮ್ಮನ್ನು ಹುಡುಕಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಮಯವನ್ನು ಉತ್ತಮವಾಗಿ ಬಳಕೆ ಮಾಡಿ. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ

ಹೊಸ ಯೋಜನೆ, ವ್ಯಾಪಾರ ವಹಿವಾಟುಗಳಿಗೆ ನಿಮ್ಮ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಪ್ರಗತಿಯ ಕ್ಷೇತ್ರದಲ್ಲಿ ಹಲವು ಮಾರ್ಗಗಳು ತೆರೆದು ಕೊಳ್ಳುತ್ತವೆ ಮತ್ತು ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.(ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಚತುರ್ದಶಿ/ಹುಣ್ಣಿಮೆ
ನಕ್ಷತ್ರ: ಕೃತ್ತಿಕಾ ನಕ್ಷತ್ರ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!