ಬೆಂಗಳೂರು ಗ್ರಾಮಾಂತರ ಜಿಲ್ಲೆ; 2025 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (Teacher Eligibility Test ) ರಾಜ್ಯಾದ್ಯಂತ ಡಿಸೆಂಬರ್ 07 ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. ಜಿಲ್ಲೆಯಲ್ಲಿ 06 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ.
ಪರೀಕ್ಷೆಯನ್ನು ಪಾರದರ್ಶಕವಾಗಿ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ತಪಾಸಣೆ ಮತ್ತು ಮುಖ ಚಹರೆ ತಪಾಸಣೆಯನ್ನು ಮಾಡಲಾಗುವುದು.
ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿದ್ದು, ಮೊದಲ ಪತ್ರಿಕೆಯು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡಶಾಲ ವಿಭಾಗ) ದೊಡ್ಡಬಳ್ಳಾಪುರ ಹಾಗೂ ಶ್ರೀ ದೇವರಾಜು ಅರಸು ಪದವಿ ಪೂರ್ವ ಕಾಲೇಜು (ಪ್ರೌಡಶಾಲೆ ವಿಭಾಗ) ಕೊಡಿಗೇಹಳ್ಳಿಯಲ್ಲಿ ನಡೆಸಲಾಗುತ್ತದೆ.
ಎರಡನೇ ಪತ್ರಿಕೆಯು ಮಧ್ಯಾಹ್ನ 2 ರಿಂದ ಸಂಜೆ 4:30 ವರೆಗೆ ಕೊಂಗಡಿಯಪ್ಪ ಪ್ರೌಡಶಾಲೆ, ಸರ್ಕಾರಿ ಪ್ರೌಡಶಾಲೆ ಅರಳು ಮಲ್ಲಿಗೆ ಬಾಗಿಲು ದೊಡ್ಡಬಳ್ಳಾಪುರ, ಕಾರ್ಮೆಲ್ ಜ್ಯೋತಿ ಹೈಸ್ಕೂಲ್ ದೊಡ್ಡಬಳ್ಳಾಪುರ, ಎಂ.ಎ.ಬಿ.ಎಲ್ ಹೈಸ್ಕೂಲ್ ಇಲ್ಲಿ ನಡೆಸಲಾಗುವುದು.
ಈ ಬಾರಿ ಪತ್ರಿಕೆ-1 ಕ್ಕೆ 544 ಹಾಗೂ ಪತ್ರಿಕೆ-2 ಕ್ಕೆ 1719 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಂಜಿನಪ್ಪ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)