ನವದೆಹಲಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಹಾಗೂ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ (D.K. Suresh) ದೆಹಲಿ ಪೊಲೀಸರು (Delhi Police) ನೋಟಿಸ್ (Notice) ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧ ವಿಭಾಗದಿಂದ ನೋಟಿಸ್ ನೀಡಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ವಿವರವಾದ ಹಣ ಕಾಸು ಮತ್ತು ವಹಿವಾಟು ಮಾಹಿತಿಯ ನ್ನು ಕೋರಿ ನೋಟಿಸ್ ಕೊಟ್ಟಿದ್ದಾರೆ.
ನ.29ರಂದು ನೋಟಿಸ್ ನೀಡಿರುವ ಪೊಲೀಸರು, ಡಿ.19ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.