ದೊಡ್ಡಬಳ್ಳಾಪುರ: ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ (Bashettihalli Town Panchayat Election) ಶನಿವಾರ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 8 ನಾಮಪತ್ರಗಳು ಸಲ್ಲಿಕೆಯಾಗಿವೆ.
2ನೇ ವಾರ್ಡ್ (ಮೋಪರಹಳ್ಳಿ)ನಿಂದ ಚಂದ್ರಶೇಖರ, 4ನೇ ವಾರ್ಡ್ (ಅರೇಹಳ್ಳಿಗುಡ್ಡದಹಳ್ಳಿ) ನಿಂದ ಸುಬ್ರಮಣಿ ಎಸ್. 5ನೇ ವಾರ್ಡ್ ವರದನಹಳ್ಳಿ(ಪೂರ್ವ)ದಿಂದ ವೆಂಕಟೇಶ, 6ನೇ ವಾರ್ಡ್ (ಕಸವನಹಳ್ಳಿ ಮತ್ತು ಬಿಸುವನಹಳ್ಳಿ)ನಿಂದ ಸಹನ.ಎಂ ನಾಲ್ಕು ಮಂದಿ ಪಕ್ಷೇತರರಾಗಿ ಹಾಗೂ 13ನೇ ವಾರ್ಡ್ (ವಿಜಯನಗರ)ದಿಂದ ಎಂ.ಎನ್.ಶ್ರೀದೇವಿ, 16ನೇ ವಾರ್ಡ್ (ಅಂಬೇಡ್ಕರ್ ನಗರ )ದಿಂದ ಮಂಜುಳ.ಎಂ ಬಿಜೆಪಿ ಪಕ್ಷದಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.
ಈ ಮುಂಚೆ 4ನೇ ವಾರ್ಡ್ (ಅರೇಹಳ್ಳಿಗುಡ್ಡದಹಳ್ಳಿ)ಯಿಂದ ಶ್ರೀನಿವಾಸ ರೆಡ್ಡಿ ಹಾಗೂ 5ನೇ ವಾರ್ಡ್ ವರದನಹಳ್ಳಿ(ಪೂರ್ವ)ದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಡಿ. 9 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಡಿ.10 ನಾಮಪತ್ರಗಳನ್ನು ಪರಿಶೀಲಿಸುವುದು. ಡಿಸೆಂಬರ್ 12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ನಗರಸಭೆ ಉಪಚುನಾವಣೆ: ಒಂದು ನಾಮಪತ್ರ ಸಲ್ಲಿಕೆ
ದೊಡ್ಡಬಳ್ಳಾಪುರ ನಗರಸಭೆಯ 21 ನೇ ವಾರ್ಡ್ ನ ಹೇಮಾವತಿಪೇಟೆ ವಾರ್ಡ್ನ ಚುನಾವಣೆಗೆ ಶನಿವಾರ ಬಿಜೆಪಿಯಿಂದ ಜಿ.ಜೆ.ನವೀನ್ ನಾಮಪತ್ರ ಸಲ್ಲಿಸಿದರು.