ದೊಡ್ಡಬಳ್ಳಾಪುರ: 2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.
ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಆರಂಭಕ್ಕೂ ಸಾಕಷ್ಟು ಮುಂಚಿತವಾಗಿ ಮುಖಚಹರೆ ಹಾಗೂ ದಾಖಲಾತಿಗಳ ತಪಾಸಣೆ ನಡೆಸಲಾಯಿತು.
ಪ್ರಥಮ ಪತ್ರಿಕೆ ಬೆಳಿಗ್ಗೆ 9.30 ರಿಂದ 12ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡಶಾಲೆ ವಿಭಾಗ) ಹಾಗೂ ಶ್ರೀ ದೇವರಾಜು ಅರಸು ಪದವಿ ಪೂರ್ವ ಕಾಲೇಜು (ಪ್ರೌಡಶಾಲೆ ವಿಭಾಗ) ಎರಡು ಪರೀಕ್ಷಾ ಕೇಂದ್ರದಲ್ಲಿ ನಡೆಯಿತು.
ಎರಡನೇ ಪತ್ರಿಕೆ ಮಧ್ಯಾಹ್ನ 2 ರಿಂದ 4.30ರ ವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ಶ್ರೀದೇವರಾಜ ಅರಸು ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಶ್ರೀ ಕೊಂಗಾಡಿಯಪ್ಪ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಅರಳುಮಲ್ಲಿಗೆ ಬಾಗಿಲು, ಕಾರ್ಮೆಲ್ ಜ್ಯೋತಿ ಪ್ರೌಢ ಶಾಲೆ, ಎಂ.ಎ.ಬಿ.ಎಲ್ ಪ್ರೌಢ ಶಾಲೆಗಳಲ್ಲಿ ನಡೆಯಿತು.
ಈ ಬಾರಿ ಪತ್ರಿಕೆ-1 ಕ್ಕೆ 544 ಹಾಗೂ ಪತ್ರಿಕೆ-2 ಕ್ಕೆ 1719 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ ತಿಳಿಸಿದ್ದಾರೆ.