ದೊಡ್ಡಬಳ್ಳಾಪುರ: ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ (The Devil) ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅಂತೆಯೇ ದೊಡ್ಡಬಳ್ಳಾಪುರದ ಎರಡು ಚಿತ್ರ ಮಂದಿರಗಳಲ್ಲಿ ಮುಂಜಾನೆ 6:30ರಿಂದಲೇ ಶೋಗಳು ಆರಂಭವಾಗಿದ್ದು, ಅಭಿಮಾನಿಗಳ ಉತ್ಸಾಹಕ್ಕೆ ಪಾರವೇ ಇಲ್ಲ.
ದಿ ಡೆವಿಲ್ ಸಿನಿಮಾದ ಪ್ರದರ್ಶನ ಇಂದು ಮುಂಜಾನೆ 6:30ಕ್ಕೆ ಶುರುವಾಗಿದ್ದರೂ ಕೂಡ, ನಿನ್ನೆ ರಾತ್ರಿಯಿಂದಲೇ ಥಿಯೇಟರ್‌ಗಳ ಮುಂದೆ ದರ್ಶನ್ ಸೆಲೆಬ್ರಿಟೀಸ್ ಹಬ್ಬ ಶುರು ಮಾಡಿದ್ದರು.
ದರ್ಶನ್ ಅವರನ್ನ ತೆರೆ ಮೇಲೆ ನೋಡಿದ್ದೇ ತಡ, ಹಬ್ಬದ ರೀತಿ ಥಿಯೇಟರ್‌ಗಳಲ್ಲಿ ಅಭಿಮಾನಿಗಳು ತಮ್ಮ ಬಾಸ್‌ನ ಸೆಲೆಬ್ರೇಟ್ ಮಾಡ್ತಿದ್ದಾರೆ.
ಥಿಯೇಟರ್ ಎದುರು ಕಟೌಟ್‌ಗಳು, ಬ್ಯಾನರ್‌ಗಳೊಂದಿಗೆ ಸಂಭ್ರಮಾಚರಣೆ ಜೋರಾಗಿದ್ದು, ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ, ಬೂದಗುಂಬ ಈಡುಗಾಯಿ ಹೊಡೆದು ದ್ರಿಷ್ಟಿ ತಗೆದರು.
ಇನ್ನೂ ಬೆಂಗಳೂರಿನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್, ಪುತ್ರ ವಿನಿತ್ ದರ್ಶನ್, ಯುವ ನಟ ಧನ್ವೀರ್ ನಟಿ ರಚನಾ, ಸೇರಿದಂತೆ ಅನೇಕರು ಅಭಿಮಾನಿಗಳೊಂದಿಗೆ ಡೆವಿಲ್ ಸಿನಿಮಾ ನೋಡಿ, ನೋವಿನಲ್ಲಿಯೂ ಸಂಭ್ರಮಿಸಿದರು.
The wait is over the Boss Arrives 🥰 #BoxOfficeSultan #ChallengingStar @dasadarshan From the first frame it’s full BLAST MODE with unstoppable mass power! The Devil in Cinemas Now 🔥@sjmcfilms @vijayaananth2 pic.twitter.com/BBoBrPhzTs
— D Company(R)Official (@Dcompany171) December 11, 2025
ದಿ ಡೆವಿಲ್ ಸಿನಿಮಾಗೆ ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಕೂಡ ಬಿದ್ದಿದೆ.