ದೊಡ್ಡಬಳ್ಳಾಪುರ: ನಗರಸಭೆಯ 21 ನೇ ವಾರ್ಡ್ ನ ಹೇಮಾವತಿಪೇಟೆ ವಾರ್ಡ್ನ ಉಪ ಚುನಾವಣೆಗೆ (By-election) ಒಟ್ಟು ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಈ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಹೇಮಂತ್ ಕುಮಾರ್.ಜಿ.ಆರ್ ಹಾಗೂ ರಘುನಂದನ್ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಬಿಜೆಪಿಯಿಂದ ಜಿ.ಜೆ.ನವೀನ್, ಕಾಂಗ್ರೆಸ್ ನಿಂದ ಕೆ.ಜಿ.ದಿನೇಶ ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.