ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ರೋಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಅರಿವು (Legal awareness) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಾಗಡಿ ಅವರ ಆದೇಶದ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರದ ಸೇವಕ ಕೃಷ್ಣ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಫೋಕ್ಸೋ ಕಾಯಿದೆ, ಮಕ್ಕಳ ಅಪಹರಣ ಕುರಿತಂತೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಂಗವಾಗಿ ಚರ್ಚಾ ಸ್ಪರ್ಧೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ವಿ.ಶ್ರೀನಿವಾಸ್, ಸಿಆರ್‌ಪಿ ಕೆ.ಎಲ್.ನಾರಾಯಣಪ್ಪ, ಶಿಕ್ಷಕರಾದ ಬಿ.ಆರ್.ರಂಗನಾಥ್, ಎ.ಅಂಬರೀಶ್, ಪೊಲ ಸಿಬ್ಬಂದಿ ಶಿವಾನಂದ ಮತ್ತಿತರರಿದ್ದರು.