
ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಅಂಗನವಾಡಿ ಕೇಂದ್ರ 1ರ ವಿದ್ಯಾರ್ಥಿಗಳಿಗೆ ಗ್ರಾಮಪಂಚಾಯಿತಿ ಸದಸ್ಯೆ ರಾಧ ಮಂಜುನಾಥ್ ಅವರು ಐಡಿ ಕಾರ್ಡ್‌ಗಳನ್ನು (ID Cards) ವಿತರಿಸಿದರು.
ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೆ ರಾಧ ಮಂಜುನಾಥ್ ಅವರು ಸ್ವಂತ ಖರ್ಚಿನಲ್ಲಿ ಉಚಿತವಾಗಿ ಐಡಿ ಕಾರ್ಡ್ ಕೊಡುಗೆಯಾಗಿ ನೀಡಿದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಸುವರ್ಣಮ್ಮ, ಸಹಾಯಕಿ ಗೀತಮ್ಮ, ಗ್ರಾಪಂ ಸಿಬ್ಬಂದಿಗಳಾದ ನಂದಿನಿ, ರಂಜಿತ, ವರ್ತಕ ಮಂಜುನಾಥ್, ಪೋಷಕರಾದ ನೇತ್ರಾವತಿ, ಮಮತಾ ಮಂಜುನಾಥ್, ಮಮತಾ ನರಸಿಂಹರಾಜು ಇದ್ದರು.