
ಕಲಬುರಗಿ: ರಾಜ್ಯದಲ್ಲಿ ಸಜ್ಜನರ ಸರಕಾರ ತರಲು ನಾವು ಜನವರಿ 24ರಂದು ಕಲಬುರಗಿಯಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷದ ವಿಭಾಗೀಯ ಸಮಾವೇಶ ನಡೆಸಿ, ಪಕ್ಷದ ಹೆಸರು ಹಾಗೂ ಚಿಹ್ನೆ ಘೋಷಿಸಲಾಗುವುದು ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ (C.M.Ibrahim) ಹೇಳಿದರು.
ಕಲಬುರಗಿ ಬಸವಣ್ಣ ನವರ ಕರ್ಮಭೂಮಿ. ಬಂದೇನವಾಜರ ಪುಣ್ಯ ಭೂಮಿ. ಶರಣಬಸವೇಶ್ವರರು, ಬಾಬಾಸಾಹೇಬ ಅಂಬೇಡ್ಕರ್ ಓಡಾಡಿದ ನಾಡು. ಈ ನಾಡಿನಲ್ಲೇ ಜನವರಿ 24 ರಂದು ದೊಡ್ಡ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗುವುದು.
ಅವರನ್ನು (ಬಿಜೆಪಿ, ಕಾಂಗ್ರೆಸ್) ಪದೇ ಪದೆ ನೋಡಿದ್ದೀರಿ., ನಮ್ಮನ್ನೂ ಒಮ್ಮೆ ನೋಡಿ. ಅವರಿಗೆ ಟಿಪ್ಪು ಸುಲ್ತಾನ್ ಹೆಸರಳೇಲು ಭಯವಿದೆ. ನಮ್ಮ ಪ್ರಣಾಳಿಯಕೆಯಲ್ಲಿ ಟಿಪ್ಪು ಸುಲ್ತಾನ್ ಅವರ ಫೋಟೋ ಬಳಸಿದ್ದೇವೆ. ನಮಗೆ ಶಕ್ತಿ ಇದೆ. ಮೋದಿ ಆಗಲಿ, ಅವರಪ್ಪನಿಗಾಗಲಿ ಹೆದರಲ್ಲ.. ಏಕೆ ಹೆದರಬೇಕು..? ಇದು ನಮ್ಮ ದೇಶ, ಸಿಆರ್‌ಸಿ ಆಗಲಿ, ಎನ್‌ಆರ್‌ಸಿ ಆಗಲಿ ಯಾವುದಾರರು ತರಲಿ ನಾವು ಹೆದರುವುದಿಲ್ಲ ಅಮಿತ್ ಶಾ ಎಂದರು.
ಇದೇ ವೇಳೆ ಅಧಿಕಾರ ಸಿಕ್ಕರೆ ಈ ನೆಲದ ರೂಪುರೇಷೆ ಯನ್ನೇ ಬದಲಿಸುತ್ತೇವೆ ಎಂದರು.