
ಕೆರೊಲಿನಾ: ಉತ್ತರ ಕೆರೊಲಿನಾದ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (Plane crash) ಸಾವನ್ನಪ್ಪಿದ ಏಳು ಜನರಲ್ಲಿ ಮಾಜಿ ನಾಸ್ಕರ್ ಚಾಲಕ ಮತ್ತು ಅವರ ಕುಟುಂಬ ಸೇರಿದೆ ಎಂದು ಕಾರು ರೇಸಿಂಗ್ ಸಂಸ್ಥೆ ತಿಳಿಸಿದೆ.
ಸೆಸ್ನಾ C550 ವಿಮಾನವು ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಫ್ಲೋರಿಡಾಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ತಾಂತ್ರಿಕ ತೊಂದರೆಯ ಕಾರಣ ಪೈಲಟ್ ವಿಮಾನವನ್ನು ಮರಳಿ ವಿಮಾನ ನಿಲ್ದಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕೆ ಅಪ್ಪಳಿಸಿ, ಬೆಂಕಿಗಾಹುತಿಯಾಗಿದೆ.
Former NASCAR driver Greg Biffle crashed Statesville Regional Airport in NC
— Umair Javed (@umairjaved1591) December 18, 2025
Killing 6 people
Cessna C550 business jet crashed around 10:20 a.m. while attempting an emergency landing
Aircraft reportedly took off from the same airport at 10:06 a.m. but quickly turned back pic.twitter.com/xAs4F1abJu
ಈ ಅಪಘಾತದಲ್ಲಿ ನಿವೃತ್ತ ನಾಸ್ಕರ್ ಚಾಲಕ ಗ್ರೆಗ್ ಬಿಫಲ್ (55 ವರ್ಷ), ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಪುತ್ರ ರೈಡರ್, 14 ವರ್ಷದ ಪುತ್ರಿ ಎಮ್ಮಾ ಸೇರಿದಂತೆ ಮೃತಪಟ್ಟಿದ್ದಾರೆ. ಅಲ್ಲದೆ ಡೆನ್ನಿಸ್ ಡಟ್ಟನ್, ಅವರ ಪುತ್ರ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್‌ವರ್ತ್ ಕೂಡ ವಿಮಾನದಲ್ಲಿದ್ದು, ಅವರೆಲ್ಲರೂ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.
ಷಾರ್ಲೆಟ್ ನಗರದಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಉತ್ತರ ಕೆರೊಲಿನಾ ರಾಜ್ಯ ಹೆದ್ದಾರಿ ಗಸ್ತು ದಳ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ವಿಮಾನ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.