
ದೊಡ್ಡಬಳ್ಳಾಪುರ: ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ (Ayyappaswamy Temple) ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ 52ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮಗಳನ್ನು ಡಿ.21 ರಂದು ನಡೆಯಲಿದೆ.

ಬೆಳಿಗ್ಗೆ 5 ಗಂಟೆಗೆ ಗಣಹೋಮ,ಮಧ್ಯಾಹ್ನ 11 ಗಂಟೆ ಅಯ್ಯಪ್ಪಸ್ವಾಮಿ ಭಜನೆ, ಮಧ್ಯಾಹ್ನ 12 ಕ್ಕೆ ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇದೇ ವೇಳೆ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ನಡೆಯಲಿದೆ.
ಸಂಜೆ 4ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಅಯ್ಯಪ್ಪಸ್ವಾಮಿ ಉತ್ಸವದಲ್ಲಿ ವೀರಭದ್ರ, ವೀರಗಾಸೆ ಕುಣಿತ, ಕೇರಳದ ಚಂಡೆ ವಾದ್ಯ, ದೇವರ ವೇಷಭೂಷಣಗಳ ಪ್ರದರ್ಶನದ ಕಲಾತಂಡಗಳು ಭಾಗವಹಿಸಲಿವೆ.