
ನವದೆಹಲಿ: ಇತ್ತೀಚೆಗಷ್ಟೇ ರೈಲು ಪ್ರಯಾಣಿಕರ (Train Passengers) ಲಗೇಜಿಗೆ ಶುಲ್ಕ ವಿಧಿಸುವ ನಿರ್ಣಯದ ಬೆನ್ನಲ್ಲೇ, ಕೇಂದ್ರದ ಮೋದಿ ಸರ್ಕಾರ (Modi Government) ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಪ್ರಯಾಣ ದರ ಏರಿಕೆ ಮಾಡಲಿದೆ.
ಇದರಿಂದ ದೂರ ದೂರಿಗೆ ಪ್ರಯಾಣಿಸುವ ಕೆಲವರಿಗೆ ಬೆಲೆ ಹೆಚ್ಚಳವಾಗಲಿದೆ.
ಎಕ್ಸ್‌ಪ್ರೆಸ್ ರೈಲುಗಳ ಎಸಿ ಹಾಗೂ ನಾನ್ ಎಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ ದರ ಏರಿಕೆ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ನಾನ್ -ಎಸಿ ಕೋಚ್ ನಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು 10 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಉಪನಗರ ರೈಲು ಗಳಲ್ಲಿನ ಮಾಸಿಕ ಟಿಕೆಟ್ ದರ ಹೆಚ್ಚಳ ವಾಗುವುದಿಲ್ಲ.
ದೂರ ದೂರಿಗೆ ಪ್ರಯಾಣಿ ಸುವ ರೈಲುಗಳಲ್ಲಿ 215 ಕಿ.ಮೀ.ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಏರಿಕೆ ಇಲ್ಲ ಎಂದು ರೈಲ್ವೆ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
215 ಕಿ.ಮೀ. ಮೇಲ್ಪಟ್ಟ ಸಾಮಾನ್ಯ ದರ್ಜೆಯ ಪ್ರಯಾಣ ದರದಲ್ಲಿ ಪ್ರತಿ ಕಿ.ಮೀಗೆ ದರ ಏರಿಕೆ ಮಾಡಲಾಗಿದೆ. ಪ್ರಯಾಣ ದರ ಏರಿಕೆಯಿಂದ 2026ರ ಮಾರ್ಚ್ ವೇಳೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿಯಾಗಿ 600 ಕೋಟಿ ರೂ ಆದಾಯ ಬರಲಿದೆ ಎಂದು ಇಲಾಖೆ ಹೇಳಿದೆ.
ಈ ಮುಂಚೆ 2025ರ ಜುಲೈ ತಿಂಗಳಲ್ಲಿ ರೈಲು ಪ್ರಯಾಣ ದರ ಏರಿಕೆ ಮಾಡಲಾಗಿತ್ತು.