
ದೊಡ್ಡಬಳ್ಳಾಪುರ: ಇದೇ ತಿಂಗಳ 25 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ (Ghati Subrahmanya) ಬ್ರಹ್ಮ ರಥೋತ್ಸವ (Brahma Rathotsava) ಕುರಿತಂತೆ ಸಿದ್ಧತೆ ಜೋರಾಗಿ ನಡೆದಿದೆ.
ಬ್ರಹ್ಮರಥೋತ್ಸವ ದಂದು ಪ್ರತಃ ಕಾಲ 02:00 ಗಂಟೆಗೆ ದೇವಾಲಯ ತೆರೆಯಲಾಗುತ್ತಿದ್ದು, 02:30 ಗಂಟೆಗೆ ಅಭಿಷೇಕ ಪ್ರಾರಂಭವಾಗಿ ಬೆಳಗೆ, 04:30 ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ.
ಬೆಳಗೆ, 05:00 ರಿಂದ 06:00 ಗಂಟೆಗಳ ವರೆಗೆ ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 06:00 ಗಂಟೆಯಿಂದ ಭಕ್ತಾಧಿಗಳಿಗಾಗಿ ಧರ್ಮ ದರ್ಶನ ಮತ್ತು ರೂ. 50 ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.
ಉಚಿತ ಬಸ್ ವ್ಯವಸ್ಥೆ
ರಥೋತ್ಸವ ದಿನದಂದು ಬರುವ ಭಕ್ತಾಧಿಗಳಿಗಾಗಿ ದೊಡ್ಡಬಳ್ಳಾಪುರದ ಬಳಿ ಕಂಟನಕುಂಟೆಯಿಂದ 15 ಮತ್ತು ಮಾಕಳಿಯಿಂದ 10 ಉಚಿತ ಬಸ್ (KSRTC) ಗಳನ್ನು ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಅಲ್ಲದೆ ಈ ಸ್ಥಳಗಳಲ್ಲಿ 04 ಮತ್ತು 02 ಚಕ್ರ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಜನವರಿ 01 ರಿಂದ 31 ರವರಗೆ ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ.
ಭದ್ರತೆ
ಭಕ್ತಾಧಿಗಳ ಭದ್ರತೆ ಮತ್ತು ಸಂಚಾರ ಸುಗಮ ವ್ಯವಸ್ಥೆಗಾಗಿ ಸುಮಾರು 700 ಜನ ಪೋಲಿಸ್ ಸಿಬ್ಬಂದಿ ಮತ್ತು 200 ಮಂದಿ ಹೋಂ ಗಾರ್ಡ್ ಗಳನ್ನು ನಿಯೋಜಿಸಲಾಗಿರುತ್ತದೆ.
ಸರಗಳ್ಳತನ, ಜೇಬುಗಳ್ಳತನ ಹಾಗೂ ಯಾವುದೇ ಅವಘಡಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ಷೇತ್ರದ 01 ಕಿ.ಮೀ. ಸುತ್ತಳತೆಯಲ್ಲಿ ಸುಮಾರು 80 ಸಿ.ಸಿ.ಕ್ಯಾಮರ ಗಳನ್ನು ಅಳವಡಿಸಿ ಕಣಾವಲು ಇರಿಸಲಾಗಿರುತ್ತದೆ.
ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 6 ರಿಂದ ರಾತ್ರಿ 8.30ರ ವರೆಗೆ ಲ ಭಕ್ತಾಧಿಗಳಿಗೆ ಉಚಿತ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಭಕ್ತಾಧಿಗಳಿಗೆ ಸುಗಮ ದರ್ಶನದ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು ರೂ. 50ಗಳ ವಿಶೇಷ ದರ್ಶನದ ಕ್ಕೂ ಲೈನ್ ಅನ್ನು ಮಾಡಿಸಲಾಗಿರುತ್ತದೆ (ಕ್ಯೂ ಲೈನ್‌ನಲ್ಲಿರುವ ಭಕ್ತಾಧಿಗಳಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ತುರ್ತು ಸೇವೆಗಳ ನಿಮಿತ್ತ 03 Ambulance ವಾಹನಗಳನ್ನು ಮತ್ತು ಆರೋಗ್ಯ ಇಲಾಖೆ ತಂಡವನ್ನು ಹಾಗೂ ಅಗ್ನಿ ಶಾಮಕ ವಾಹನದ ವ್ಯವಸ್ಥೆ ಮಾಡಲಾಗಿದೆ.
ಡಿ.23ರಿಂದ 28 ರವರೆಗೆ ಶ್ರೀಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
ನೇರ ದರ್ಶನ
ಹಿರಿಯ ನಾಗರೀಕರು, ವಿಶೇಷ ಚೇತನರು ಗರ್ಭಿಣಿ ಸ್ತ್ರೀಯರು ಮತ್ತು 01 ವರ್ಷದ ಒಳಗಿನ ಶಿಶುವಿನೊಂದಿಗೆ ಬರುವ ಸ್ತ್ರೀಯರಿಗೆ ನೇರ ದರ್ಶನದ ವ್ಯವಸ್ಥೆಗಾಗಿ Buggis ಗಳ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಭಕ್ತಾಧಿಗಳು/ ಸಾರ್ವಜನಿಕರ ಉಪಯೋಗಕ್ಕಾಗಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿರುತ್ತದೆ.