
ಬೆಂಗಳೂರು: ದರ್ಶನ್ (Darshan) ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರ ಖಾತೆಯಲ್ಲಿ ಅಶ್ಲೀಲ ಕಾಮೆಂಟ್ ಹಾಗೂ ಪೋಸ್ಟ್ ಹಾಕಿ ವಿಕೃತಿ ಮೆರೆದಿರುವವರ ವಿರುದ್ಧ ದೂರು ನೀಡಿದ್ದು, ನಾನು ‘ಮೌನವಾಗಿ ಕುಳಿತುಕೊಂಡಿದ್ದೇನೆ ಎಂದುಕೊಳ್ಳಬೇಡಿ’ ಎಂದು ವಾರ್ನಿಂಗ್ ನೀಡಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿರುವ ಪೋಸ್ಟ್ ಹಾಗೂ ಕಾಮೆಂಟ್‌ಗಳ ಸ್ಟ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುವುದರ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ಪೋಸ್ಟ್ ಸಂದೇಶ ಹೀಗಿದೆ
ಇದು ನಿಮ್ಮ ಕೆಟ್ಟ ಮನಸ್ಥಿತಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಎಲ್ಲಾ ವರ್ಗದ ಅಭಿಮಾನಿಗಳಿಗೆ ಧನ್ಯವಾದಗಳು. ಅಶ್ಲೀಲ ಪೋಸ್ಟ್ ಹಾಗೂ ಕಾಮೆಂಟ್ ಹಾಕಿದ ಖಾತೆಗಳ ವಿರುದ್ಧ ದೂರು ದಾಖಲಾಗಿವೆ.
ಅಶ್ಲೀಲ ಪದ ಬಳಸುವ, ನಡವಳಿಕೆ ಮತ್ತು ಸಭ್ಯತೆಯನ್ನು ಬದಿಗಿಟ್ಟ ಯುವತಿಯರಿಗೆ ಮತ್ತು ಪುರುಷರಿಗೆ ವಿಶೇಷ ಚಪ್ಪಾಳೆ. ನಾನು ಮೌನವಾಗಿ ಕುಳಿತುಕೊಂಡಿದ್ದೇನೆ ಅಂದುಕೊಳ್ಳಬೇಡಿ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.