
ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ (Ghati Subramanya) ಕ್ಷೇತ್ರದಲ್ಲಿ ಡಿಸೆಂಬರ್ 25 ರಂದು ಬ್ರಹ್ಮರಥೋತ್ಸವ (Brahmarathotsava) ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಹಾಗೂ ಮೇಲಿನಜೂಗಾನಹಳ್ಳಿ (ಎಸ್.ಎಸ್.ಘಾಟಿ) ಗ್ರಾಮ ಪಂಚಾಯಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕಗಳಿಗೆ ಇಂದು ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೇಲಿನಜೂಗಾನಹಳ್ಳಿ (ಎಸ್.ಎಸ್.ಘಾಟಿ) ಗ್ರಾಮ ಪಂಚಾಯಿತಿ ಅಧ್ಯಕ್ಷರೆ ಉಮಾಬಾಯಿ ಕುಮಾರ್ ನಾಯ್ಕ್, ಪಿಡಿಒ ರಮಿತ ಕೆ.ಟಿ., ಕಾರ್ಯದರ್ಶಿ ಎಸ್‌ಮಧುಸೂಧನ್, ಬಿಲ್ ಕಲೆಕ್ಟರ್‌ಗಳಾದ ಶ್ರೀನಿವಾಸ್, ಲೋಕೇಶ್ ಕಲಾವಿದರಾದ ಮುನಿಶಾಮಣ್ಣ, ಅಶ್ವತ್ಥಪ್ಪ ಮತ್ತಿತರರಿದ್ದರು.