ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದ (Ghati Subrahmanya Brahmarathotsava) ಹಿನ್ನೆಲೆಯಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ಘಾಟಿ ಕ್ಷೇತ್ರದಲ್ಲಿ ನಡೆಸಲಾಯಿತು.
ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆಯನ್ನು ಪಿಡಿಒ ರಮಿತ ಚಾಲನೆ ನೀಡಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯ 35 ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯೆಯರು ಭಾಗವಹಿಸಿ, ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು.

ದೀಪಗಳು, ಆಹಾರ ಉತ್ಪನ್ನಗಳು, ಕರಕುಶಲ ವಸ್ತುಗಳು, ಹಣ್ಣು- ಹಂಪಲು, ಹೂ, ತರಕಾರಿ, ವಿಡಿವಿಕೆ ಉತ್ಪನ್ನಗಳು, ಜ್ಯೂಟ್ ಬ್ಯಾಗ್, ಕಡಲೆ ಫೂರಿ, ಕಬ್ಬಿನ ಜ್ಯೂಸ್, ಸೋಡಾ, ಬಜ್ಜಿ ಬೋಂಡಾ, ಗೊಂಬೆಗಳು, ಜೇನುತುಪ್ಪ ಲಭ್ಯವಿದ್ದವು.
ಕಾರ್ಯಕ್ರಮದಲ್ಲಿ ಘಾಟಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮಧುಸೂಧನ್, ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಚೈತ್ರ, ವಲಯ ಮೇಲ್ವಿಚಾರಕ ಶ್ರೀನಿವಾಸ್, ಶ್ವೇತಾ, ಹರ್ಷಿತ್ ಮತ್ತು ಮುಖ್ಯ ಪುಸ್ತಕ ಬರಹಗಾರರಾದ ರಾಮಲಕ್ಷ್ಮಮ್ಮ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.