
ದೊಡ್ಡಬಳ್ಳಾಪುರ: ಜನವರಿ 15-20 ರಿಂದ ನಡೆಯಲಿರುವ ಶ್ರೀ ಕ್ಷೇತ್ರ ಸುತ್ತೂರು ಮಠದ ಜಾತ್ರಾ ಮಹೋತ್ಸವ (Suttur Jatra Mahotsava) ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ, ಬೀಳ್ಕೊಡಲಾಯಿತು.
ನಗರದ ಸೋಮೇಶ್ವರ ದೇವಾಲಯದ ಬಳಿ ಬಂದ ಶ್ರೀ ಕ್ಷೇತ್ರ ಸುತ್ತೂರು ಮಠದ ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಜಗದ್ಗುರು ಬಸವೇಶ್ವರ ಮಹಾಮಠದ ಪರಮ ಪೂಜ್ಯರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮಿಜಿ, ವೀರಶೈವಲಿಂಗಾಯತ ಮಹಾಸಭಾ ಯುವಘಟಕ ಜಿಲ್ಲಾಧ್ಯಕ್ಷ ಲೋಕೇಶ್ ನಾಗಸಂದ್ರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್, ಮುಖಂಡರು ಪುಟ್ಟಬಸವರಾಜು, ಮಹಾಲಿಂಗಯ್ಯ, ಬಸವರಾಜಯ್ಯ, ಮುನಿರಾಜು, ಶ್ವೇತ, ಸೋಮಶೇಖರ್, ಮಹಾಸಭಾ ಜಿಲ್ಲಾ ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಶ್ರೀ ಮಠದ ಭಕ್ತಾಧಿಗಳು ಇದ್ದರು.