ದೊಡ್ಡಬಳ್ಳಾಪುರ: ಕೆಆರ್‌ಎಸ್ ಪಕ್ಷದ (KRS Party) ನೂತನ ಪದಾದಿಕಾರಿಗಳ ಆಯ್ಕೆ ಹಾಗೂ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಭಾನುವಾರ ನಗರದಲ್ಲಿ ನಡೆಯಿತು.
ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಆರೋಗ್ಯಸ್ವಾಮಿ ಅವರು ನೂತನ ಪದಾಧಿಕಾರಿಗಳಿಗೆ ಆದೆಶ ಪತ್ರ ನೀಡಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ರೈತರು, ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮ ಹಾಗೂ ವಿಳಂಭವನ್ನು ತಪ್ಪಿಸಲು ಪಕ್ಷದ ಪದಾಧಿಕಾರಿಗಳು ಸದಾ ಕೆಲಸ ಮಾಡಬೇಕು.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕಿದ್ದರೆ ಕೆ.ಆರ್.ಎಸ್.ಪಕ್ಷವನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಡಿ.ಚಿಕ್ಕೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಸಿ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಜೈರಾಮ್,ಜಿ.ಸೋಮಶೇಖರ್,ವೆಂಕಟ್ಗೌಡ,ಎನ್.ಮಂಜುನಾಥ್, ಆರ್.ಅಶೋಕ್, ಎಚ್.ಎನ್. ಸುಬ್ರಮಣ್ಯ, ಜಿ.ರಾಮಚಂದ್ರಯ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಘಟಕದ ಅಧ್ಯಕ್ಷರಾಗಿ ಕೆ.ಎನ್.ಗೋವಿಂದರಾಜ್ ನೇಮಕವಾಗಿದ್ದಾರೆ.
ಇದೇ ಸಂದರ್ಭದಲ್ಲಿ ದಿವಂಗತ ಪ್ರಮಾಣಿಕ ಪೊಲೀಸ್ ಮಧುಕರಶೆಟ್ಟಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು.