ದೊಡ್ಡಬಳ್ಳಾಪುರ; ನಿನ್ನೆ ರಾತ್ರಿ ಸಂಭವಿಸಿದ ಸಿಮೆಂಟ್ ಬಲ್ಕರ್ ಗೆ ಬೈಕ್ ಡಿಕ್ಕಿ ಹೊಡೆದ ಪ್ರಕರಣದಲ್ಲಿ (Accident) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಮೃತನನ್ನು ಪಾವಗಡ ತಾಲೂಕಿನ ಗಂಗವಾರ ಗ್ರಾಮದ ಅಶೋಕ್ (24 ವರ್ಷ) ಎಂದು ಪೊಲೀಸರು ತಿಳಿಸಿದ್ದಾರೆ.
ಮಾಕಳಿ ದುರ್ಗದ ರಾಜ್ಯ ಹೆದ್ದಾರಿಯಲ್ಲಿ ಸಿಮೆಂಟ್ ಬಲ್ಕರ್‌ಗೆ ಹಿಂದಿನ ಡಿಕ್ಕಿ ಹೊಡೆದ ಪರಿಣಾಮ ತೆಲಂಗಾಣ ರಾಜ್ಯದ ಪರಗಿ ಮೂಲದ ಪವನ್ (21 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಭಾನುವಾರ ರಾತ್ರಿ ಗೌರಿಬಿದನೂರು ಮೂಲಕ ದೊಡ್ಡಬಳ್ಳಾಪುರದ ಕಡೆಗೆ ಬೈಕಿನಲ್ಲಿ ಬರುವ ವೇಳೆ ಮುಂದೆ ಸಾಗುತ್ತಿದ್ದ ಸಿಮೆಂಟ್ ಬಲ್ಕರ್ ಬೈಟ್ ಡಿಕ್ಕಿ ಹೊಡೆದು ಘಟನೆ ಸಂಭವಿಸಿತ್ತು.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.