ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ (Arnab Goswami) ಮತ್ತೆ ಲಯಕ್ಕೆ ಮರಳಿರುವುದು ಬಿಜೆಪಿಗರಿಗೆ ಆತಂಕಕ್ಕೆ ಕಾರಣವಾಗಿದ್ದರೆ, ಪತ್ರಕರ್ತರು, ವಿರೋಧ ಪಕ್ಷಗಳಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
People were asking on X and everywhere else that What happened to Arnab Goswami? Why does he suddenly look anti government?
— Abhinay | With U (@AbhinayWithYou) December 29, 2025
Now he has answered it all clearly and directly.
Everyone should listen to this before forming opinions.#AMAWithArnab #AskArnab #RepublicWorld pic.twitter.com/IBLc4n65es
ಹೌದು ರಾಷ್ಟ್ರೀಯ ವಾದಿ ಪತ್ರಕರ್ತ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವರನ್ನು ತಮ್ಮ ವೃತ್ತಿಜೀವನದ ಬಹುಪಾಲು ಕಾಲ ಬಿಜೆಪಿಯನ್ನು ಬೆಂಬಲಿಸುವ ಮತ್ತು ವಿರೋಧ ಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸುವ ಪತ್ರಕರ್ತ ಎಂದು ವ್ಯಾಪಕವಾಗಿ ಗ್ರಹಿಸಲಾಗಿದೆ.
ಆದಾಗ್ಯೂ, ಇಂಡಿಗೋ ವಿಮಾನಯಾನ ಬಿಕ್ಕಟ್ಟು ನಿರ್ವಹಣೆ, ಅರಾವಳಿ ಬೆಟ್ಟಗಳಲ್ಲಿನ ಪರಿಸರ ನಾಶ ಮತ್ತು ದೆಹಲಿಯ ಮಾಲಿನ್ಯ ಬಿಕ್ಕಟ್ಟಿನಂತಹ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಅವರು ಇತ್ತೀಚೆಗೆ ಮಾಡಿದ ವರದಿಗಳು ರಾಷ್ಟ್ರ ರಾಜಕಾರಣ ಮತ್ತು ಮಾಧ್ಯಮ ವಲಯಗಳಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿವೆ.
Destroyed BJP on the IndiGo fiasco
— Roshan Rai (@RoshanKrRaii) December 19, 2025
Destroyed BJP on the AQI issue
Now Destroying BJP on the MP Children Hospital issue
Has Arnab Goswami suddenly realised he’s a journalist?
pic.twitter.com/EiwrbWvmIB
ರಾಜಕೀಯ ವಿಶ್ಲೇಷಕರು ಮತ್ತು ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ, ಅರ್ನಬ್ ಅವರ ಈ ಬದಲಾವಣೆಯನ್ನು ಹಠಾತ್ ಸೈದ್ಧಾಂತಿಕ ವಿರಾಮವಲ್ಲ, ಬದಲಾಗಿ ಅರ್ನಾಬ್ ಗೋಸ್ವಾಮಿಯವರ ರಾಷ್ಟ್ರೀಯವಾದ ಜಾಗೃತವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Old Arnab Goswami is back 🔥
— Voice of Hindus (@Warlock_Shubh) December 19, 2025
Everyone should watch this video of Arnab Goswami and support him.
While other journalists remain silent, he is boldly raising his voice to #SaveAravalliHills pic.twitter.com/e75WO1A6SK
ಅರ್ನಬ್ ಗೋಸ್ವಾಮಿ ಅವರ ಇತ್ತೀಚಿನ ಟೀಕೆಗಳು ಹೆಚ್ಚಾಗಿ ವಿಷಯಾಧಾರಿತವಾಗಿದ್ದು, ವಿಮಾನ ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ಪರಿಸರ ನಾಶದಂತಹ ಸಾರ್ವಜನಿಕ ಜೀವನದ ಮೇಲೆ ನೇರವಾಗಿ ದೇಶದ ಮೇಲೆ ಪರಿಣಾಮ ಬೀರುವ ವಿಷಯಗಳ ಮೇಲೆ ಕೇಂದ್ರೀಕರಿಸಿದೆ.
It took one question + one clip for Arnab Goswami to make a comeback.
— Kantala fc (@ifOnlyKantala) December 24, 2025
This is the truth, ask your government questions.
Hold power accountable first, everyone is talking about arnab now. pic.twitter.com/JLWmYqFkj8
ದೇಶದಲ್ಲಿ ಈಗಾಗಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತರು ಇಲ್ಲದೆ, ಗೋದಿ ಮೀಡಿಯಾ ಎಂದು ರಾಷ್ಟ್ರೀಯ ಮಾಧ್ಯಮಗಳನ್ನು ಲೇವಡಿ ಮಾಡಲಾಗುತ್ತಿದೆ.
BREAKING : Republic has defeated top channels in TRP on TV and social media popularity
— Amock_ (@Amockx2022) December 25, 2025
On TV ⚡ Views share increased from 2% to 10.7% which is 5 times more
On Social media ⚡ Reach increased by massive 19 times
Impact of Arnab Goswami doing honest journalism is visible 🔥 pic.twitter.com/qUgRQsIOlD
ಇದರ ನಡುವೆ “ಜನರೇ ನಿಜವಾದ ವಿರೋಧ ಪಕ್ಷ” ಎಂಬ ಅರ್ನಬ್ ಅವರ ಮಾತು ಅವರ ಹಿಂದಿನ “ಜನಪರ ಪತ್ರಕರ್ತ” ಇಮೇಜ್ ಅನ್ನು ಮರಳಿ ಪಡೆಯುವ ಪ್ರಯತ್ನವಾಗಿದೆ ಎನ್ನಲಾಗುತ್ತಿದೆ.
“ಗೋದಿ ಮೀಡಿಯಾ” ಎಂಬ ಟ್ಯಾಗ್ ಅನ್ನು ತೊಡೆದುಹಾಕಲು ಅರ್ನಾಬ್ ಅವರ ವಿಶ್ವಾಸಾರ್ಹತೆ ನಿರ್ವಹಣೆಯ ಭಾಗವಾಗಿರಬಹುದು ಮತ್ತು ಭವಿಷ್ಯದ ಚುನಾವಣಾ ಚಕ್ರಗಳಿಗೆ ಮುಂಚಿತವಾಗಿ, ವಿಶೇಷವಾಗಿ 2029 ರಲ್ಲಿ, ಸಂಪಾದಕೀಯ ಸ್ವಾತಂತ್ರ್ಯವನ್ನು ಪ್ರದರ್ಶಿಸುವ ಮೂಲಕ ರಿಪಬ್ಲಿಕ್ ಟಿವಿಯ ವಿಶ್ವಾಸಾರ್ಹತೆಯನ್ನು ಬಲಪಡಿಸಲು ಅವರು ಪ್ರಯತ್ನಿಸುತ್ತಿರಬಹುದು ಎಂದು ಮತ್ತೊಬ್ಬ ವಿಶ್ಲೇಷಕರು ಹೇಳುತ್ತಾರೆ.
ಆದಾಗ್ಯೂ, ಅರ್ನಬ್ ಬಿಜೆಪಿಯ ಮೇಲೆ ನೇರವಾಗಿ ಮುಗಿಬಿದ್ದಿದ್ದಾರೆ. ಮೋದಿ ಸರ್ಕಾರ ವ್ಯವಸ್ಥಿತ ವೈಫಲ್ಯಗಳು, ಅಧಿಕಾರಶಾಹಿ ವೈಫಲ್ಯಗಳು ಅಥವಾ ನಿರ್ದಿಷ್ಟ ಸಚಿವಾಲಯಗಳನ್ನು ಕಾರ್ಯತಂತ್ರವಾಗಿ ಗುರಿಯಾಗಿಸಿಕೊಂಡಿದ್ದಾರೆ.
ಆ ಮೂಲಕ ಮೋದಿ ಅವರಿಂದ ಬದಲಾವಣೆ ಸಾಧ್ಯ ಎಂದು ನಂಬಿದ್ದ ಪತ್ರಕರ್ತರು, ಕಳೆದ 12 ವರ್ಷಗಳಿಂದ ದೇಶದ ದುಸ್ಥಿಯ ನೋಡಿ ಬೇಸತ್ತು, ತೇಜೋವಧೆ ಮಾಡುವ ಐಟಿ ಸೆಲ್‌ಗೂ ಬೆದರದೇ ಅನೇಕ ಪತ್ರಕರ್ತರು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದರ ನಡುವೆ ಈಗ ರಿಪಬ್ಲಿಕ್ ಟಿವಿ “ಗೋದಿ ಮೀಡಿಯಾ” ಎಂಬ ಹಣೆಪಟ್ಟಿಯಿಂದ ಹೊರಬರಲು ಖ್ಯಾತ ಪತ್ರಕರ್ತ ಅರ್ನಬ್ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಪಲ್ಯ, ಲೋಪಗಳ ಪ್ರಶ್ನೆ ಮಾಡುತ್ತಿರುವುದು ನಿಷ್ಠಾವಂತ ಪತ್ರಕರ್ತರ ಆತ್ಮಸ್ಥೈರ್ಯ ಹೆಚ್ಚಿಸಿದೆ.