ನವದೆಹಲಿ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಎಲ್‌ಪಿಜಿ (LPG) ಬಳಕೆದಾರರಿಗೆ ದೊಡ್ಡ ಶಾಕ್ ಎದುರಾಗಿದೆ. ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯಲ್ಲಿ ಭಾರಿ ಏರಿಕೆಯಾಗಲಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಈ ಹೆಚ್ಚಳ ಉಂಟಾಗಿದೆ. ದೇಶದ ನಾಲ್ಕು ಮಹಾನಗರಗಳಲ್ಲಿ ಮೂರು ನಗರಗಳು 111 ರೂ. ಹೆಚ್ಚಳ ಕಂಡರೆ, ಒಂದು ನಗರದಲ್ಲಿ 110 ರೂ. ಹೆಚ್ಚಳ ಕಂಡಿದೆ.
ಇದರ ಪರಿಣಾಮವಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ನ ಬೆಲೆ ಸುಮಾರು 1,700 ರೂ. ತಲುಪಿದೆ. ಜೂನ್ 2025 ರ ನಂತರದ ಅತ್ಯಧಿಕ ದರ ಇದಾಗಿದೆ. ದೇಶಾದ್ಯಂತ ಬೆಲೆಗಳು ಸುಮಾರು 1,850 ರೂ. ತಲುಪಿವೆ.
ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಗಳು ಹೆಚ್ಚಾಗಿದೆ. ನವೆಂಬರ್ 2023 ರ ನಂತರ ವಾಣಿಜ್ಯ ಬಳಕೆ ಸಿಲಿಂಡರ್ 100 ರೂ.ಗಿಂತ ಹೆಚ್ಚು ಏರಿಕೆಯಾಗಿರುವುದು ಇದೇ ಮೊದಲು. ಅಕ್ಟೋಬರ್ 2023 ರ ನಂತರ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಗಳಲ್ಲಿ ಇದು ಅತಿದೊಡ್ಡ ಹೆಚ್ಚಳವಾಗಿದೆ.
ಮತ್ತೊಂದೆಡೆ, ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ.