ದೊಡ್ಡಬಳ್ಳಾಪುರ: ಪಾದಚಾರಿಯನ್ನು ರಕ್ಷಿಸುವ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Accident) ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಸಾವನಪ್ಪಿರುವ ಘಟನೆ ತಾಲೂಕಿನ ಕಾಡನೂರು ಕೈಮರದ ಬಳಿ ಸಂಭವಿಸಿದೆ.
ಮೃತರನ್ನು ದೊಡ್ಡಬಳ್ಳಾಪುರ ನಗರದ ಮಾರುಕಟ್ಟೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಜಗದೀಶ್ (58 ವರ್ಷ) ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪುರುಷನ ಹಳ್ಳಿ ಮೂಲದ ಜಗದೀಶ್ ಅವರು ನೆಲಮಂಗಲದಲ್ಲಿ ವಾಸವಿದ್ದು, ಶನಿವಾರವಾದ ಇಂದು ಮುಂಜಾನೆ ಶಾಲೆಗೆ ಕಾರಿನಲ್ಲಿ ಬರುವ ವೇಳೆ, ಕಾಡನೂರು ಕೈಮದರದ ಬಳಿ ಅಡ್ಡಬಂದ ಪಾದಚಾರಿಯ ರಕ್ಷಿಸಲು ಮುಂದಾಗಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮುಖ್ಯ ಶಿಕ್ಷಕ ಜಗದೀಶ್ ಅವರು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತರುವ ವೇಳೆ, ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮೃತರು ಮಡದಿ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆಂದು ತಿಳಿದುಬಂದಿದೆ.