ಗುವಾಹಟಿ: ಬೈಕ್ ಡಿಕ್ಕಿಯಾಗಿ (Accident) ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಮತ್ತು ಅವರ ಪತ್ನಿ ರೂಪಾಲಿ ಬರುವಾ (RupaliBarua) ಗಾಯಗೊಂಡ ಘಟನೆ ಗುವಾಹಟಿಯ ಮೃಗಾಲಯ ರಸ್ತೆ ಬಳಿ ನಡೆದಿದೆ.
ಆಶಿಶ್ ವಿದ್ಯಾರ್ಥಿ ದಂಪತಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ವೊಂದು ಡಿಕ್ಕಿಯಾಗಿದೆ. ಮಾಹಿತಿ ತಕ್ಷಣ ತಿಳಿದ ಸ್ಥಳಕ್ಕೆ ಧಾವಿಸಿದ ಗೀತಾ ನಗರದ ಪೊಲೀಸ್ ಸಿಬ್ಬಂದಿ ಆಶಿಶ್ ವಿದ್ಯಾರ್ಥಿ ದಂಪತಿಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರು.
Veteran actor #AshishVidyarthi and his wife #RupaliBarua suffered minor injuries in a late-night accident in #Guwahati. Vidyarthi addressed concerns on social media, confirming both are safe and under medical care.
— IndiaToday (@IndiaToday) January 3, 2026
Read More: https://t.co/ryBrvRxeNX pic.twitter.com/lRfiTk8pWV
ಗೀತಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೃಗಾಲಯ ಟಿನಿಯಾಲಿಯ ಗುವಾಹಟಿ ಅಡ್ರೆಸ್ ಹೊಟೇಲ್ ಬಳಿ ಆಶಿಶ್ ವಿದ್ಯಾರ್ಥಿ ದಂಪತಿ ರಸ್ತೆ ದಾಟುತ್ತಿದ್ದಾಗ ಚಾಂದ್ಧರಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕ್ ಅವರಿಗೆ ಹೊಡೆದಿದೆ.
ಈ ಅಪಘಾತದಲ್ಲಿ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಗೀತಾನಗರದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಗೊಂಡ ಆಶಿಶ್ ವಿದ್ಯಾರ್ಥಿ ದಂಪತಿ ಮತ್ತು ಬೈಕ್ ಸವಾರನನ್ನು ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರು.
ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಶನಿವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ನಟ ಆಶಿಶ್ ವಿದ್ಯಾರ್ಥಿ, ತಮಗೆ ಅಪಘಾತವಾಗಿರುವುದನ್ನು ದೃಢಪಡಿಸಿದ್ದಾರೆ.