ದೊಡ್ಡಬಳ್ಳಾಪುರ: ಪ್ರತಿ ತಿಂಗಳು ಬರುವ ಸಂಕಷ್ಟಹರ ಚತುರ್ಥಿ ಮಂಗಳವಾರ ಬಂದರೆ, ಅದು ಅಂಗಾರಕ ಸಂಕಷ್ಟಹರ ಚತುರ್ಥಿ (Angarak Sankashtahara Chaturthi). ಇದು ಅತ್ಯಂತ ಮಹತ್ವದ ದಿನ ಎಂಬುದು ಹಿಂದೂಗಳ ನಂಬಿಕೆ.
ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಬಸ್ ನಿಲ್ದಾಣ ಬಳಿಯಲ್ಲಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜೆ ನೆರವೇರಿಸಿ, ಪ್ರಸಾದ ವಿನಿಯೋಗ ಕೈಗೊಳ್ಳಲಾಗಿತ್ತು.
ಸಂಜೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಹಾಗೂ ಕೋದಂಡರಾಮ ಭಜನೆ ಮಂಡಳಿ ಮತ್ತು ಶ್ರೀರಾಮ ಭಜನೆ ಮಂಡಳಿಯರಿಂದ ಭಜನೆ ಕಾರ್ಯಕ್ರಮ ನಡೆಸಿ ಕೊಟ್ಟರು.