ದೊಡ್ಡಬಳ್ಳಾಪುರ: ಸೋಲಿನ ಹತಾಶೆ, ಪಕ್ಷದ ಆಂತರಿಕ ಮಟ್ಟದಲ್ಲಿನ ಯಾವುದೇ ಬೇಸರ ಇದ್ದರೂ ಬದಿಗೊತ್ತಿ, ಮುಖಂಡರು, ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಜೆಡಿಎಸ್ (JDS) ಪಕ್ಷದ ಶಕ್ತಿಯನ್ನು ತೋರುವ ಅನಿರ್ವಾರ್ಯತೆ ಎದುರಾಗಿದೆ ಎಂದು ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಹೇಳಿದ್ದಾರೆ.
ಜ. 10 ರಂದು ದೊಡ್ಡಬಳ್ಳಾಪುರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಭೆಯ ಕುರಿತು ಹಲವು ಮುಖಂಡರ ಆಕ್ಷೇಪ, ಬೇಸರ ಕುರಿತಂತೆ ಈ ರೀತಿ ಹರೀಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಮೈತ್ರಿಯಿಂದ ಜೆಡಿಎಸ್‌ಗಿಂತ ಹೆಚ್ಚಾಗಿ ಬಿಜೆಪಿಗೆ ಅನುಕೂಲವಾಗಿದೆ. ಆದಾಗ್ಯೂ ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಸಂಘಟನೆಯನ್ನು ಕುಗ್ಗಿಸಲು, ಆಪರೇಷನ್ ಕಮಲದಂತ ಪ್ರಯತ್ನ ನಡೆಯುತ್ತಿರುವುದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಕೆರಳಿಸಿದೆ. ಈ ವಿಷಯ ಪಕ್ಷದ ವರಿಷ್ಠರ ಗಮಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಅಂತೆಯೇ ಪಕ್ಷದ ಶಕ್ತಿ ಭದ್ರ ಪಡಿಸಲು, ಕಾರ್ಯಕರ್ತರಿಗೆ ಚೈತನ್ಯ ನೀಡಲು ಪಕ್ಷದ ವರಿಷ್ಠರು ರಾಜ್ಯಾದ್ಯಂತ ಕಾರ್ಯಕರ್ತರ ಸಭೆಯನ್ನು ಆಯೋಜಿಸುತ್ತಿದ್ದಾರೆ.
ಡಿ. 27 ರಂದು ನಡೆದ ಸಭೆಯಲ್ಲಿ ದೊಡ್ಡಬಳ್ಳಾಪುರದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗದ ಕಾರಣ ಇದೇ ತಿಂಗಳ (ಜ. 10)ರಂದು ನಗರದ ಒಕ್ಕಲಿಗರ ಸಮುದಾಯ ಭವದಲ್ಲಿ ಕಾರ್ಯಕರ್ತರ ಸಭೆ ಆಯೋಜಿಲಾಗಿದ್ದು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಇಲ್ಲಿ ಕಾರ್ಯಕರ್ತರ ಅಹವಾಲುಗಳನ್ನು ವರಿಷ್ಠರು ಆರಿಸುತ್ತಾರೆ ಎಂದು ತಿಳಿಸಿದ್ದಾರೆ.
ಬಾಶೆಟ್ಟಿಹಳ್ಳಿ ಸೋಲಿಗೆ ಹಣಬಲ ಕಾರಣ
ಇನ್ನೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆಗೆ ಸ್ಥಳೀಯ ಪಕ್ಷದ ಮುಖಂಡರೆಂದು ಕೊಳ್ಳುವವರು ಬಿಜೆಪಿ ಜೊತೆ ಹೊಂದಾಣಿ ಮಾಡಿಕೊಂಡಿದ್ದು, ಹಣ ಬಲದ ನಡೆದ ಚುನಾವಣೆಯಾಗಿ ಮಾರ್ಪಾಡು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯ ಕುರಿತು ಆತಂಕವನ್ನು ಹೆಚ್ಚಿಸಿದೆ.
ಈ ಹಿನ್ನಡೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡರನ್ನು ಹೊಣೆಗಾರನ್ನಾಗಿ ಮಾಡುವುದು ಮೂರ್ಖತನವಾಗುತ್ತದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಲು ಮುನೇಗೌಡರ ಪಾತ್ರ ಅಪಾರವಾಗಿದೆ. ಅಂತ ನಾಯಕನ ಬದಿಗೊತ್ತುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಈ ಕುರಿತಂತೆ ಬಿ.ಮುನೇಗೌಡರು ಹಾಗೂ ವರಿಷ್ಠರ ಜೊತೆ ಮಾತನಾಡಲಾಗುವುದು ಎಂದು ಹರೀಶ್ ಗೌಡ ಹೇಳಿದ್ದಾರೆ.