ದೊಡ್ಡಬಳ್ಳಾಪುರ: ಚಿಕ್ಕಪ್ಪನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದ ಆರೋಪಿ ಸಿದ್ದಲಿಂಗಸ್ವಾಮಿ ಎಂಬಾತನಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ನಿರ್ಮಲಾ ಅವರು 10 ವರ್ಷಗಳ ಜೈಲು ಶಿಕ್ಷೆ (10 years in prison) ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆನಕಿನಮೊಡಗು ಗ್ರಾಮದ ನಿವಾಸಿ ಸಿದ್ದಲಿಂಗಸ್ವಾಮಿ 2019ರ ಜನವರಿಯಲ್ಲಿ ಜಮೀನಿ ವಿವಾದ ಹಿನ್ನೆಲೆಯಲ್ಲಿ ಈತನ ಚಿಕ್ಕಪ್ಪ ರಾಮಕೃಷ್ಣಪ್ಪ ಎಂಬಾತನಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ.
ಇದರ ದೂರು ದಾಖಲಿಸಿಕೊಂಡಿದ್ದ ಅಂದಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಗಜೇಂದ್ರ, ಮಂಜೇಗೌಡ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು.
ಆರು ವರ್ಷಗಳ ವಿಚಾರಣೆಯ ನಂತರ ಮಂಗಳವಾರ ಸಂಜೆ ವಿಚಾರಣ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಸರ್ಕಾರಿ ಅಭಿಯೋಜಕರಾಗಿ ಟಿ.ಎನ್.ನಟರಾಜ್ ವಾದ ಮಂಡಿಸಿದ್ದರು.