ದೊಡ್ಡಬಳ್ಳಾಪುರ: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಹೊಡೆಯುವ ಮೂಲಕ ಕಿಡಿಗೇಡಿಗಳು ಉಪಟಳ (Miscreant’s annoyance) ಮೆರೆದಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆದಿದೆ.
ಆರೂಢಿ ಗ್ರಾಮದ ಕೆಂಪೇಗೌಡ ನಗರ ನಿವಾಸಿಯಾದ ಹರೀಶ್ ಕುಮಾರ್ ಅವರು, ಬೆಂಗಳೂರಿನಲ್ಲಿ ಕ್ಯಾಬ್ ವೃತ್ತಿ ನಡೆಸುತ್ತಿದ್ದು, ಎರಡು ದಿನಗಳ ಹಿಙದೆ ಸ್ವಗ್ರಾಮಕ್ಕೆ ಬಂದಿದ್ದ ಅವರು, ಮನೆಯ ಮುಂದಿನ ಜಾಗದಲ್ಲಿ ಕಾರನ್ನು ನಿಲ್ಲಿಸಿದ್ದಾರೆ.
ಆದರೆ ಬುಧವಾರ ರಾತ್ರಿ ಕಿಡಿಗೇಡಿಗಳು ಕಾರಿನ ಹಿಂಭಾದ ಗಾಜನ್ನು ಪುಡಿಪುಡಿ ಮಾಡಿ ಪರಾರಿಯಾಗಿದ್ದು, ಇಂದು (ಗುರುವಾರ) ಬೆಳಗ್ಗೆ ಹರೀಶ್ ಅವರ ತಾಯಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಆರೂಢಿ ಹಾಗೂ ಸುತ್ತಮುತ್ತಲ್ಲ ಗ್ರಾಮದಲ್ಲಿ ಮದ್ಯದ ನಶೆಯಲ್ಲಿ ಕಿಡಿಗೇಡಿಗಳ ಉಪಟಳ ವ್ಯಾಪಕವಾಗಿದ್ದು, ನಡು ರಸ್ತೆಯಲ್ಲಿ ಜನ್ಮದಿನದ ಆಚರಣೆ, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ನೀಡುವಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಪೊಲೀಸರು ಸೂಕ್ತ ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.