ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾ ದೇಶದಲ್ಲಿ (Bangladesh) ಹಿಂದೂಗಳ (Hindus) ನರಮೇಧ ಮುಂದುವರಿದ್ದು, ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ನೌಗಾಂವ್ ಜಿಲ್ಲೆಯಲ್ಲಿ ಪುಂಡರ ಗುಂಪು ದಾಳಿಯಿಂದ ಹಿಂದೂ ಯುವಕನ ಮೇಲೆ ದಾಳಿ ನಡೆಸಿದ್ದು, ಅದರಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಜಿಗಿದು ಆತ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು 25 ವರ್ಷದ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದೆ. ಗಲಭೆ ಆರಂಭವಾದಾಗಿನಿಂದ ಬಲಿಯಾದ ಏಳನೇ ಹಿಂದೂ ಈತ.
ಚಕೋಗಿರಿ ಎಂಬ ಪ್ರದೇಶದಲ್ಲಿ ಕಳ್ಳತನ ಆರೋಪದ ಮೇಲೆ ಮಿಥುನ್ ರನ್ನು ದುಷ್ಕರ್ಮಿಗಳ ಗುಂಪು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಮಿಥುನ್ ಕಾಲುವೆಗೆ ಜಿಗಿದಿದ್ದಾರೆ.
#BREAKING: Yet Another Hindu Killed in Bangladesh. Minority Hindu Youth dies in Bangladesh by jumping into a canal after being chased by a mob. In Mahadebpur of Naogaon, a young man named Mithun Sarkar (25) died after drowning while being chased by locals on suspicion of theft. pic.twitter.com/leXEFgPvCf
— Aditya Raj Kaul (@AdityaRajKaul) January 6, 2026
ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಆತನ ಶವ ಪತ್ತೆಯಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನೌಗಾಂವ್ ಪೊಲೀಸ್ ಅಧಿಕಾರಿ ಮಹಮ್ಮದ್ ತಾರಿಕಲ್ ಇಸ್ಲಾಂ ಮಾಧ್ಯಮಗಳಿಗೆ ಹೇಳಿದ್ದಾರೆ.
ಕೇವಲ 24 ಗಂಟೆಗಳಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆಮಾಡ ಲಾಗಿತ್ತು. ಅಲ್ಲದೇ ಹಿಂದೂ ವಿಧವೆಯನ್ನು 2 ಕೀಚಕರು ಸಾಮೂಹಿಕ ಅತ್ಯಾಚಾರ ಎಸಗಿ ಕೌರ್ಯ ಮೆರೆದಿದ್ದು, ಹಿಂದೂಗಳು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಅನಿರ್ವಾರ್ಯತೆ ಎದುರಾಗಿದೆ.
ಆದಾಗ್ಯೂ ಭಾರತದ ಖಂಡಿಸಲು ಮಾತ್ರ ಸೀಮಿತವಾಗಿದ್ದು, ನೆರೆ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳದ ಕಾರಣ ಇಂದು ಆ ದೇಶದೊಂದಿಗೆ ಹಿಂದೂಗಳ ರಕ್ಷಣೆ ಕುರಿತು ಕನಿಷ್ಠ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.