ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಪ್ತ ಮಿತ್ರ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಭಾರತಕ್ಕೆ ಮಾರಕವಾಗುವಂಹ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು, ಈ ಕುರಿತಂತೆ ಭಾರತ ಸರ್ಕಾರ ಕನಿಷ್ಠ ಪ್ರತಿಕ್ರಿಯೆ ನೀಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ.
ಕೆಲ ವರ್ಷಗಳ ಹಿಂದಷ್ಟೇ ತನ್ನ ಆಪ್ತ ಗೆಳೆಯ ನೆಂದು ನಂಬಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಡಿರುವ ಮಾತು, ಭಾರತದ ಮೇಲೆ ವಿಧಿಸುತ್ತಿರುವ ತೆರೆಗೆಯ ದಂಡದಿಂದಾಗಿ, ಟ್ರಂಪ್ ಅಧ್ಯಕ್ಷನಾಗಿಸಲು ಮೋದಿ ಕೈಗೊಂಡ ಪ್ರಚಾರ ಕಾರಣಕ್ಕೆ ಭಾರತ ಕೈಸುಟ್ಟುಕೊಳ್ಳುವಂತಾಗಿದೆ.
ಈಗಾಗಲೇ ರಷ್ಯಾದಿಂದ ಕಡಿಮೆ ದರದಲ್ಲಿ ಭಾರತದ ಖಾಸಗಿ ಕಂಪನಿ ಪೆಟ್ರೋಲ್ ಉತ್ಪಾದನ್ಮ ಖರೀದಿ ಮಾಡುತ್ತಿರುವುದಕ್ಕೆ ಕೆರಳಿರುವ ಟ್ರಂಪ್ ಶೇ.50 ತೆರಿಗೆಯ ದಂಡ ವಿಧಿಸಿದ್ದಾರೆ, ಈಗ ಅದನ್ನು ಶೇ.500 ರಷ್ಟು ಹೆಚ್ಚಿಸುವುದಾಗಿ ವಾರ್ನಿಂಗ್ ಕೂಡ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ರಿಪಬ್ಲಿಕನ್ ಸಂಸದ ಲಿಂಡ್ಡೆ ಗ್ರಹಾಮ್ ಮತ್ತು ಡೆಮೋಕ್ರಾಟ್ ಸಂಸದ ರಿಚರ್ಡ್ ಬ್ಲೂಮೆಂಥಲ್ ಸಿದ್ದಪಡಿಸಿದ್ದು, ಟ್ರಂಪ್ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಲಾಗಿದೆ.
ಮುಂದಿನ ವಾರ ಅಮೆರಿಕದ ಸಂಸತ್ತಿನಲ್ಲಿ ರಷ್ಯಾ ನಿರ್ಬಂಧ ಮಸೂದೆಯನ್ನು ಮಂಡಿಸಲಾಗುತ್ತದೆ. ಅಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಭಾರತ ಇಕ್ಕಟ್ಟಿಗೆ ಸಿಲುಕಲಿದೆ.
ಈ ವರ್ಷಾರಂಭದಲ್ಲೇ ಭಾರತದ ಮೇಲೆ ಗರಿಷ್ಠ ತೆರಿಗೆ ಹೇರುವುದಾಗಿ ಟ್ರಂಪ್ ಸುಳಿವು ನೀಡಿದ್ದರು. ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ತೈಲ, ಯುರೇನಿ ಯಮ್ ಉತ್ಪನ್ನಗಳನ್ನು ಖರೀದಿಸುವ ರಾಷ್ಟ್ರಗಳಿಗೆಲ್ಲ ಇದು ಅನ್ವಯಿಸುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಮತ್ತೊಂದೆಡೆ ಮೊದಿ ಅವರು, ‘ಸರ್, ನಾನು ನಿಮ್ಮನ್ನು ಭೇಟಿಯಾಗಬಹುದೇ?’ ಎಂದು ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದರು ಎಂದು ಲೇವಡಿ ರೂಪದಲ್ಲಿ ಆಡಿರುವ ಮಾತು ಭಾರತೀಯರ ಕೆರಳಿಸಿದೆ.
ಗೋದಿ ಮೀಡಿಯಾಗಳ ತೇಪೆ ಹಚ್ಚುವ ಕಾರ್ಯ
ಇನ್ನೂ ಅಮೇರಿಕಾ ಸುಂಕದ ಬರೆ ಕುರಿತು ಗೋದಿ ಮೀಡಿಯಾಗಳು ಭಾರತಕ್ಕಿಂತ ಅಮೇರಿಕಾದ ಮೇಲೆ ಪರಿಣಾಮ ಬೀರುತ್ತದೆ ಎಂದು ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿವೆ.
ಈಗಾಗಲೇ ಶೇ. 50 ರ ಸುಂಕಕ್ಕೆ ಭಾರತದ ಗಾರ್ಮೆಂಟ್ಸ್ ಉದ್ಯಮ ತತ್ತರಿಸಿ ಹೋಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಇದರ ನಡುವೆ ಶೇ.500 ತೆರಿಗೆ ಆತಂಕ ಭಾರತದ ಕ್ಷೇತ್ರದ ಮೇಲೆ ಉಂಟಾಗುವ ಪರಿಣಾಮ ಆತಂಕಕಾರಿಯಾಗಿದೆ.
ಆದಾಗ್ಯೂ ರಷ್ಯಾದಿಂದ ಕಡಿಮೆ ದರದಲ್ಲಿ ಖರೀದಿ ಮಾಡುತ್ತಿರುವ ತೈಲ ಉತ್ಪನ್ನದಿಂದ ಭಾರತೀಯ ಜನಸಾಮಾನ್ಯರಿಗೆ ಆದ ಲಾಭವೇನು.? ಅದರ ಲಾಭ ಯಾರಿಗೆ ಸಿಗುತ್ತಿದೆ..? ಅಮೇರಿಕಾದ ಶೇ.500 ತೆರಿಗೆಯ ಪರಿಣಾಮ ಭಾರತದ ಜನಸಾಮಾನ್ಯ ಏಕೆ ಹೊರಬೇಕು ಎಂಬ ಪ್ರಶ್ನೆಯನ್ನು ಕೇಳುವವರೇ ಇಲ್ಲವಾಗಿದೆ..?