Astrology: There is a possibility of making profits in business

ದಿನ ಭವಿಷ್ಯ: ಈ ರಾಶಿಯವರಿಗೆ ಆಲಸ್ಯ, ಉದಾಸೀನತೆ ಉಂಟಾಗುವ ಸಾಧ್ಯತೆ

Astrology; ಶುಕ್ರವಾರ, ಜನವರಿ 16, 2026, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ಆರ್ಥಿಕವಾಗಿ ಹಾಗೂ ಸಾಂಸಾರಿಕವಾಗಿ ಉತ್ತಮ ಕೆಲಸ ಗಳಾದರೂ ಕೆಲವು ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾ ಗಲಿದೆ.ಹೊಗಳಿಕೆಗೆ ಮರುಳಾಗದಿರಿ. ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು. (ಭಕ್ತಿಯಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ವೃಷಭ ರಾಶಿ

ಲಾಭ ಸ್ಥಾನಗತನಾದ ಗುರುವಿನಿಂದಾಗಿ ಅನಿರೀಕ್ಷಿತ ಎಷ್ಟೋ ಕಾರ್ಯ ಸಾಧನೆಯಾಗಲಿವೆ. ಮುಖ್ಯ ವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ.ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ, ಮುಖ್ಯವಾಗಿ ಯಾವುದೇ ಕೆಲಸ ಕಾರ್ಯ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಬಹುದು ಜಾಗರೂಕರಾಗಿರಿ. (ಭಕ್ತಿಯಿಂದ ಶ್ರೀ ಶಿರಡಿ ಸಾಯಿಬಾಬ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ಕೆಟ್ಟ ಜನರ ಸಹಕಾರದಿಂದ ಅಪಕೀರ್ತಿ ಉಂಟಾದೀತು. ವೈಯಕ್ತಿಕ ವಾಗಿ ಆರೋಗ್ಯದ ಬಗ್ಗೆ ಜಾಗರೂಕ ರಾಗಿರಿ.ಕೌಟುಂಬಿಕ ಸಮಸ್ಯೆಗಳು ಕಾಡಬಹುದು.ನೌಕರ ವರ್ಗದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ.(ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ

ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಿಗಳ ಉದ್ಯೋಗದ ಸಮಸ್ಯೆ ಕಂಡು ಬರಬಹುದು.ನಿಮ್ಮ ತಾಳ್ಮೆಗೆ ಇದು ಸಕಾಲವೆನಿಸಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ

ಕೆಲಸಕಾರ್ಯಗಳಲ್ಲಿ ವಿಘ್ನ, ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ ಸಂಯಮದಿಂದ ವ್ಯವಹರಿಸಿ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ

ಏಕಾದಶ ಸ್ಥಾನ ರಾಹು ವಿನಿಂದಾಗಿ ಹಾಗೂ ಶನಿಯ ಲಾಭ ಸ್ಥಾನದಿಂದಾಗಿ ಉನ್ನತಿ ತೋರಿ ಬರಲಿದೆ, ಅದಾಗ್ಯೂ ಗುರುವಿನ ವ್ಯಯಸ್ಥಿತಿ ಅನೇಕ ರೀತಿಯ ಖರ್ಚು ವೆಚ್ಚಗಳ ಹಾದಿ ಎದುರಾಗಬಹುದು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ.(ಭಕ್ತಿಯಿಂದ ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ಮಹಿಳೆಯರಿಗೆ ಉದ್ಯೋಗ ಲಾಭವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಆಲಸ್ಯ, ಉದಾಸೀನತೆ ಉಂಟಾಗಬಹುದು. ಕ್ಷೇತ್ರ ದರ್ಶನ ಭಾಗ್ಯ ಬರಲಿದೆ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಧನಸ್ಸು ರಾಶಿ

ಉದ್ಯೋಗಿಗಳಿಗೆ ವಿದೇಶ ದಲ್ಲಿ ಆಕರ್ಷಕವಾದ ದುಡಿಮೆಗೆ ಅವಕಾಶ ಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ. ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳು, ಕ್ರಿಯಾ ಶೀಲತೆಯಲ್ಲಿ ಪ್ರಶಂಸೆ ಸಿಗಲಿದೆ. ಮುಖ್ಯವಾಗಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ನಿಮ್ಮಲ್ಲಿ ಎಚ್ಚರವಿರಲಿ. ಮಾತಿನಿಂದ ಅನಾವಶ್ಯಕ ಮನಸ್ತಾಪವಾಗದಂತೆ ಜಾಗ್ರತೆ ವಹಿಸಿರಿ. (ಭಕ್ತಿಯಿಂದ ಶ್ರೀ ಚಂದ್ರ ಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ

ಕ್ರೀಡಾ ಜಗತ್ತಿನ ಪಟುಗಳಿಗೆ ಜಯವು ಕಾದಿದೆ. ಹದಗೆಟ್ಟ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಲಿದೆ. ಕೃಷಿ ಹಾಗೂ ರೈತ ವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭವನ್ನು ಕೊಡಲಿದೆ. ಆರೋಗ್ಯದಲ್ಲಿ ಜಾಗ್ರತೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ

ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜೀವನದ ಬಹು ಮುಖ್ಯ ಗುರಿಯೊಂದನ್ನು ಸಾಧಿಸಲಿದ್ದೀರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರ ದಲ್ಲಿ ನೆರವೇರಲಿವೆ. ರಾಜಕೀಯ ವರ್ಗ ದವರಿಗೆ ಉತ್ತಮ ಭವಿಷ್ಯವಿದೆ. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ತ್ರಯೋದಶಿ
ನಕ್ಷತ್ರ: ಮೂಲ ನಕ್ಷತ್ರ.

ರಾಹುಕಾಲ: 10:30AM ರಿಂದ 12:00PM
ಗುಳಿಕಕಾಲ: 07:30AM ರಿಂದ 09:00AM
ಯಮಗಂಡಕಾಲ: 03:00PM ರಿಂದ 04:30PM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ:

"ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು" ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh) ಅವರು ತಿರುಗೇಟು

[ccc_my_favorite_select_button post_id="119275"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

RCB: ಮತ್ತೆ ಕಪ್ ನಮ್ದು

RCB: ಮತ್ತೆ ಕಪ್ ನಮ್ದು

4ನೇ ಆವೃತ್ತಿಯ ಮಹಿಳಾ ಪ್ರೀಮಿ ಯರ್ ಲೀಗ್ (ಡಬ್ಲ್ಯೂಪಿ ಎಲ್) ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಸಿಎಂ ಸಿದ್ದರಾಮಯ್ಯ (Cmsiddaramaiah), ಡಿಸಿಎಂ

[ccc_my_favorite_select_button post_id="119174"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ದೊಡ್ಡಬಳ್ಳಾಪುರ: ಪತ್ನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯುತ್ತಿದ್ದವ ಅಪಘಾತದಲ್ಲಿ ಸಾವು.‌.!

ದೊಡ್ಡಬಳ್ಳಾಪುರ: ಪತ್ನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯುತ್ತಿದ್ದವ ಅಪಘಾತದಲ್ಲಿ ಸಾವು.‌.!

ಮಡದಿಗೆ ಉಂಟಾಗಿದ್ದ ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನಪ್ಪಿರುವ ಘಟನೆ (Accident) ತಾಲೂಕಿನಲ್ಲಿ ಸಂಭವಿಸಿದೆ.

[ccc_my_favorite_select_button post_id="119259"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!