ದೊಡ್ಡಬಳ್ಳಾಪುರ: ಜೆಡಿಎಸ್ (JDS) ಹಿರಿಯ ಮುಖಂಡರಾದ ಕುರುಬಗೆರೆ ಎ. ನರಸಿಂಹಯ್ಯ (A. Narsimhaiah) ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ (B. MuneGowda) ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನರಸಿಂಹಯ್ಯ ಅವರ ಕುರುಬಗೆರೆ ನಿವಾಸಕ್ಕೆ ಭೇಟಿ ನೀಡಿದ ಮುನೇಗೌಡ ಅವರು, ನರಸಿಂಹಯ್ಯ ಅವರ ಆರೋಗ್ಯ ವಿಚಾರಿಸಿ, ಹೆಚ್ಚಿನ ಒತ್ತಡಕ್ಕೆ ಒಳಗಾಗದೆ, ಸಂಪೂರ್ಣ ಗುಣಮುಖರಾಗುವವರೆಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು.
ಈ ವೇಳೆ ಮುಖಂಡರಾದ ಕುಂಟನಹಳ್ಳಿ ಮಂಜುನಾಥ್, ಚನ್ನಕೇಶವ, ಮುದ್ದಣ್ಣ, ಪುರುಷೋತ್ತಮ್ ಇದ್ದರು.