ದೊಡ್ಡಬಳ್ಳಾಪುರ: ಟಾಟಾ ಏಸ್, ಪ್ಯಾಸೆಂಜರ್ ಆಟೋ ಮತ್ತು ಸ್ಕೂಟರ್ ನಡುವೆ ಅಪಘಾತ (Accident) ಸಂಭವಿಸಿ, ಸ್ಕೂಟರ್ ಸವಾರ ಸಾವನಪ್ಪಿರುವ ಘಟನೆ ರಘುನಾಥ ಪುರ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ದೇವನಹಳ್ಳಿ ತಾಲೂಕಿನ ಬೆಟ್ಟ ಕೋಟೆ ರಾಮನಹಳ್ಳಿ ಗ್ರಾಮದ ರಾಘವೇಂದ್ರ ಕಾಮತ್ (40 ವರ್ಷ) ಎಂದು ಗುರುತಿಸಲಾಗಿದೆ.
ಸ್ಕೂಟರ್, ಪ್ಯಾಸೆಂಜರ್ ಆಟೋ ಹಾಗೂ ಕುಡಿಯುವ ನೀರಿನ ಕ್ಯಾನ್ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟಾಟಾ ಏಸ್ ವಾಹನದ ಡಿಕ್ಕಿ ಹೊಡೆದು, ದುರ್ಘಟನೆ ಸಂಭವಿಸಿದೆ.
ಅಪಘಾತ ರಭಸಕ್ಕೆ ಪ್ಯಾಸೆಂಜರ್ ಆಟೋ, ಟಾಟಾ ಏಸ್ ವಾಹನ ಮಗುಚಿ ಬಿದ್ದಿದ್ಸು, ನೀರಿನ ಕ್ಯಾನ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.