ದೊಡ್ಡಬಳ್ಳಾಪುರ: ಮೇಲ್ದರ್ಜೆಗೆರಿದ ಬಳಿಕ ನಡೆದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ (Bashettihalli town panchayat) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ನೂತನ ಅಧ್ಯಕ್ಷರಾಗಿ ಪ್ರೇಮ್ ಕುಮಾರ್, ಉಪಾಧ್ಯಕ್ಷರಾಗಿ ಶ್ವೇತಾ ಮುರುಳಿಧರ್ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿ ತಹಶಿಲ್ದಾರ್ ಮಲ್ಲಪ್ಪ.ಕೆ.ಯರಗೋಳ ಅವರ ನೇತೃತ್ವದ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ವಾರ್ಡ್ಗಳಲ್ಲಿ ಬಿಜೆಪಿ 14 ರಲ್ಲಿ ಜಯಗಳಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಹೊಸಹಳ್ಳಿ MPCSಗೆ ಚೆಲುವರಾಜು ಅಧ್ಯಕ್ಷ